ಬೆಂಗಳೂರು: ಕೊರೋನಾದಿಂದಾಗಿ ಥಿಯೇಟರ್ ಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರ ಸೂಚಿಸಿದೆ. ಇದರಿಂದಾಗಿ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಈ ನಡುವೆ ಶೂಟಿಂಗ್ ಗೊಂದಲ ಚಿತ್ರರಂಗದಲ್ಲಿ ಕಾಡುತ್ತಿದೆ.
ಕೊರೋನಾ ಕಠಿಣ ನಿಯಮ ಜಾರಿಯಾದ ಹಿನ್ನಲೆಯಲ್ಲಿ ಶೂಟಿಂಗ್ ಮುಂದುವರಿಸಬೇಕೇ ಬೇಡವೇ ಎಂಬ ಗೊಂದಲ ಹಲವರಲ್ಲಿದೆ. ಮೊನ್ನೆ ಬಿಡುಗಡೆ ಮಾಡಿದ ಕಾರ್ಯಸೂಚಿಯಲ್ಲಿ ಸಿನಿಮಾ ಶೂಟಿಂಗ್ ಬಗ್ಗೆ ಉಲ್ಲೇಖಿಸಿರಲಿಲ್ಲ.
ಹೀಗಾಗಿ ನೈಟ್ ಕರ್ಫ್ಯೂ ಕೂಡಾ ಜಾರಿಯಾಗಿರುವುದರಿಂದ ಶೂಟಿಂಗ್ ಬಗ್ಗೆ ಗೊಂದಲ ಮುಂದುವರಿದಿದೆ. ಕೆಲವು ಚಿತ್ರತಂಡಗಳು ಇನ್ ಡೋರ್ ಶೂಟಿಂಗ್ ನಡೆಸುತ್ತಿವೆ. ಶೂಟಿಂಗ್ ನಡೆಸುವಾಗಲೂ ಕೊರೋನಾ ಬಗ್ಗೆ ಭಯ ಇದ್ದೇ ಇದೆ. ಹಗಲು ಮಾತ್ರ ಶೂಟಿಂಗ್ ಮಾಡಬೇಕಿರುವುದರಿಂದ ಚಿತ್ರತಂಡಗಳಿಗೆ ಇದೊಂದು ಸವಾಲಾಗಿ ಪರಿಣಮಿಸಿದೆ.