ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಸದ್ದು ಜೋರಾಗಿ ಕೇಳುತ್ತಿರುವಂತೆ ಇದೀಗ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಫುಲ್ ಗರಂ ಆಗಿದ್ದಾರೆ.
ಪ್ರಶಾಂತ್ ಸಂಬರಗಿ ವಿರುದ್ಧ ಸಾ ರಾ ಗೋವಿಂದ್ ಕಿಡಿಕಾರಿದ್ದು, ತಮ್ಮ ವಿರುದ್ಧದ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಡ್ರಗ್ಸ್ ಮಾಫಿಯಾ ಜೊತೆಗೆ ಪ್ರಶಾಂತ್ ಸಂಬರಗಿಗೆ ಸಂಪರ್ಕವಿದ್ದು, ಅವರನ್ನು ಬಂಧಿಸಬೇಕು ಎಂದು ಸಾ ರಾ ಗೋವಿಂದ್ ಆಗ್ರಹ ಮಾಡಿದ್ದಾರೆ.
ತಾವು ರೋಲ್ ಕಾಲ್ ಪಡೆದಿರೋದನ್ನು ಸಾಬೀತುಪಡಿಸಬೇಕು. ಇಲ್ಲದಿದ್ದರೆ ಸಂಬರಗಿ ಕರ್ನಾಟಕ ಬಿಟ್ಟು ಹೋಗಬೇಕು ಎಂದು ಸವಾಲ್ ಹಾಕಿದ್ದಾರೆ.