ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಕೇಸ್ ಸದ್ದು ಮಾಡುತ್ತಿರುವಂತೆ ಇದರಲ್ಲಿ ಝಣ ಝಣ ಕಾಂಚಾಣ ವರ್ಗಾವಣೆ ಭಾರೀ ಪ್ರಮಾಣದಲ್ಲಿ ಆಗಿದೆಯಂತೆ.
ಡ್ರಗ್ಸ್ ಕೇಸ್ ನಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಆಗಿರುವ ಕುರಿತು ಇಡಿ ಯಲ್ಲಿ ಕೇಸ್ ದಾಖಲಾಗಿದೆ.
ಈ ನಡುವೆ ಕೋರ್ಟ್ ನಿಂದ ಅನುಮತಿ ಪಡೆದುಕೊಂಡಿರುವ ಇಡಿ ಅಧಿಕಾರಿಗಳು, ಐದು ದಿನಗಳವರೆಗೆ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರ ವಿಚಾರಣೆ ನಡೆಸಲಿದೆ.
ನ್ಯಾಯಾಂಗ ಬಂಧನದಲ್ಲಿರುವ ಇಬ್ಬರೂ ನಟಿಯರೂ ಇಡಿ ತನಿಖೆಗೆ ಒಳಗಾಗಲಿದ್ದಾರೆ.