ಹೈದರಾಬಾದ್: ನಟಿ ಸಮಂತಾ ಋತು ಪ್ರಭು ಅನಾರೋಗ್ಯಕ್ಕೀಡಾಗಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಲೇ ಇದೆ. ಆದರೆ ನಟಿ ಇದುವರೆಗೆ ಇದರ ಬಗ್ಗೆ ಬಾಯ್ಬಿಟ್ಟಿರಲಿಲ್ಲ.
ಅವರ ಟೀಂ ಇದರ ಬಗ್ಗೆ ಪ್ರತಿಕ್ರಿಯಿಸಿತ್ತು. ಹಾಗಿದ್ದರೂ ಸಮಂತಾಗೆ ಚರ್ಮ ಸಂಬಂಧೀ ಆರೋಗ್ಯ ಸಮಸ್ಯೆಯಿದೆ ಎನ್ನುವುದನ್ನು ನಿರಾಕರಿಸಿತ್ತು.
ಇದೀಗ ಸ್ವತಃ ಸಮಂತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚಿನ ನಾಯಿಯ ಜೊತೆಗಿನ ಫೋಟೋ ಪ್ರಕಟಿಸಿ ಡೌನ್ ನಾಟ್ ಔಟ್ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ತಾವು ಅನಾರೋಗ್ಯಕ್ಕೀಡಾಗಿರುವುದು ನಿಜ, ಆದರೆ ಕುಗ್ಗಿ ಹೋಗಿಲ್ಲ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ.
-Edited by Rajesh Patil