ಹೈದರಾಬಾದ್: ನಾಗಚೈತನ್ಯರಿಂದ ವೈವಾಹಿಕ ಜೀವನ ಮುರಿದುಕೊಂಡ ನಂತರ ಸಮಂತಾ ಈಗ ತಮ್ಮ ಮದುವೆಯಲ್ಲಿ ಬಳಸಿದ್ದ ಸೀರೆಯನ್ನೂ ಅಕ್ಕಿನೇನಿ ಕುಟುಂಬಕ್ಕೆ ಹಿಂತಿರುಗಿಸಿದ್ದಾರೆ.
ಅಕ್ಟೋಬರ್ 2 ರಂದು ಇಬ್ಬರೂ ಬೇರೆಯಾಗುವ ನಿರ್ಧಾರ ಪ್ರಕಟಿಸಿದ್ದರು. ಅದಾದ ಬಳಿಕ ಸಮಂತಾ ನಾಗಚೈತನ್ಯ ಜೊತೆಗಿನ ಎಲ್ಲಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಿದ್ದರು.
ಇದೀಗ ಮದುವೆಯಲ್ಲಿ ತೊಟ್ಟಿದ್ದ ಸೀರೆಯನ್ನೂ ಸಮಂತಾ ಅಕ್ಕಿನೇನಿ ಕುಟುಂಬಕ್ಕೆ ಹಿಂತಿರುಗಿಸಿದ್ದಾರೆ ಎಂಬ ಸುದ್ದಿಯಿದೆ. ಸೀರೆ ಮಾತ್ರವಲ್ಲದೆ, ನಾಗಚೈತನ್ಯ ನೀಡಿದ್ದ ಎಲ್ಲಾ ವಸ್ತುಗಳನ್ನೂ ಹಿಂತಿರುಗಿಸಲು ಸಮಂತಾ ನಿರ್ಧರಿಸಿದ್ದಾರಂತೆ. ಇನ್ನು ಮದುವೆ ಸೀರೆಯನ್ನು ಸಮಂತಾ ವಾಪಸ್ ಮಾಡಿದ್ದು ಅಕ್ಕಿನೇನಿ ಕುಟುಂಬಕ್ಕೆ ಬೇಸರವುಂಟು ಮಾಡಿದೆ ಎನ್ನಲಾಗಿದೆ.