Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೊದ್ಲು ಪಾಕ್‌ ಜತೆ ಚರ್ಚಿಸಿ ಯೋಧರ ಪ್ರಾಣ ಉಳಿಸಿ: ಮೋದಿ ಸರ್ಕಾರಕ್ಕೆ ಸಲ್ಮಾನ್ ಖಾನ್ ಚಾಟಿ

ಮೊದ್ಲು ಪಾಕ್‌ ಜತೆ ಚರ್ಚಿಸಿ ಯೋಧರ ಪ್ರಾಣ ಉಳಿಸಿ: ಮೋದಿ ಸರ್ಕಾರಕ್ಕೆ ಸಲ್ಮಾನ್ ಖಾನ್ ಚಾಟಿ
ಮುಂಬೈ , ಬುಧವಾರ, 14 ಜೂನ್ 2017 (16:06 IST)
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ನಡೆದಲ್ಲಿ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಮಾತುಕತೆ ನಡೆಸುವುದು ಸೂಕ್ತ ಎಂದು ಕೇಂದ್ರ ಸರ್ಕಾರಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಚಾಟಿ ಬೀಸಿದ್ದಾರೆ.
 
ಭಾರತ-ಪಾಕ್ ಯುದ್ಧದಿಂದ ಪರಿಹಾರ ದೊರೆಯಲ್ಲ. ಯುದ್ಧವೇ ಸಮಸ್ಯೆಗೆ ಅಂತಿಮ ಅಸ್ತ್ರವಲ್ಲ. ಮಾತುಕತೆಯಿಂದ ಪರಿಹಾರ ದೊರೆಯಲು ಸಾಧ್ಯ ಎಂದು ಸಲಹೆ ನೀಡಿದ್ದಾರೆ.
 
ಮೊದಲು ಪಾಕಿಸ್ತಾನದೊಂದಿಗೆ ಮಾತನಾಡಿ ಯೋಧರ ಪ್ರಾಣ ಉಳಿಸಿ. ಯುದ್ಧದಿಂದ ಯಾವ ದೇಶ ಕೂಡಾ ಉದ್ಧಾರವಾಗಿಲ್ಲ ಎಂದು ಕಿವಿಮಾತು ಹೇಳಿದ್ದಾರೆ.
 
ಉಭಯ ದೇಶಗಳ ಗಡಿಭಾಗಗಳಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೇನೆಯ ಮೇಲೆ ದಾಳಿ ಮಾಡುತ್ತಿರುವುದರಿಂದ ಉದ್ರಿಕ್ತ ವಾತಾವರಣ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. 

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಸಿ ಕೈಕೊಟ್ಟ ಪ್ರೇಮಿಯ ಮೇಲೆ ದೂರು ಕೊಟ್ಟ ಕಿರುತೆರೆ ನಟಿ