ಚೆನ್ನೈ: ನಟಿ ಸಾಯಿ ಪಲ್ಲವಿ ಯಾರಿಗೆ ಗೊತ್ತಿಲ್ಲ ಹೇಳಿ? ಈಕೆ ನ್ಯಾಚುರಲ್ ಬ್ಯೂಟಿ ಎಂದೇ ಚಿರಪರಿಚಿತ. ಈ ನಟಿ ತಮ್ಮ ಫಿಟ್ ನೆಸ್ ಸೀಕ್ರೆಟ್ ಏನೆಂದು ಬಹಿರಂಗಪಡಿಸಿದ್ದಾರೆ.
ಸಾಮಾನ್ಯವಾಗಿ ನಟಿಯರೆಂದರೆ ಫಿಟ್ ಆಗಲು ಜಿಮ್, ವರ್ಕೌಟ್ ಎಂದು ಬೆವರಿಳಿಸುತ್ತಾರೆ. ಇದು ಅತಿರೇಕವಾಗಿ ಆರೋಗ್ಯಕ್ಕೆ ತೊಂದರೆ ಮಾಡಿಕೊಳ್ಳುವುದೂ ಇದೆ.
ಆದರೆ ಸಾಯಿ ಪಲ್ಲವಿ ಹಾಗಲ್ಲ. ಆಕೆ ಫೇರ್ ನೆಸ್ ಕ್ರೀಂ ಜಾಹೀರಾತಿನಲ್ಲಿ ನಟಿಸಲೂ ಹಿಂದೇಟು ಹಾಕಿದವರು. ಹಾಗಿರುವಾಗ ಫಿಟ್ ನೆಸ್ ಗಾಗಿ ಅವರು ಏನು ಮಾಡುತ್ತಾರೆ ಗೊತ್ತಾ?
ಶೂಟಿಂಗ್ ಇದ್ದರೂ, ಇಲ್ಲದೇ ಹೋದರೂ ಪ್ರತಿನಿತ್ಯ ನೃತ್ಯ ಅಭ್ಯಾಸ ಮಾಡುವುದನ್ನು ಮಾತ್ರ ತಪ್ಪಿಸುವುದಿಲ್ಲವಂತೆ. ಆದಷ್ಟು ಉತ್ತಮ ಆಹಾರ, ಜೀವನಶೈಲಿಯೇ ತಮ್ಮ ಫಿಟ್ನೆಸ್ ನ ಗುಟ್ಟು ಎಂದಿದ್ದಾರೆ ಸಾಯಿ ಪಲ್ಲವಿ. ಜೀರೋ ಸೈಝ್ ಗಾಗಿ ಸರ್ಕಸ್ ಮಾಡುವ ಎಷ್ಟೋ ಕಲಾವಿದರ ನಡುವೆ ಈ ನಟಿ ವಿಭಿನ್ನವಾಗಿ ಕಾಣುತ್ತಾರೆ.