ಬೆಂಗಳೂರು: ಇದುವರೆಗೆ ನಟ ಸಾಧುಕೋಕಿಲ ಅವರನ್ನು ಸಂಗೀತ ನಿರ್ದೇಶಕ, ನಿರ್ದೇಶಕರಾಗಿ ನೋಡಿರುತ್ತೀರಿ. ಆದರೆ ಈಗ ಸಾಧು ಮಹಾರಾಜ್ ನಿರ್ಮಾಪಕರಾಗುತ್ತಿದ್ದಾರೆ.
ಅದೂ ಕಿರುತೆರೆಯ ಧಾರವಾಹಿಯೊಂದಕ್ಕೆ. ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಹೊಸ ಧಾರವಾಹಿಯೊಂದನ್ನು ಸಾಧು ತಮ್ಮ ಸಂಸ್ಥೆ ಸುರ ಬ್ಯಾನರ್ ನಲ್ಲಿ ನಿರ್ಮಿಸಲಿದ್ದಾರೆ. ಈ ಧಾರವಾಹಿ ಗೌರಿಪುರದ ಗಯ್ಯಾಳಿಗಳು ಎಂಬ ಟೈಟಲ್ ನೊಂದಿಗೆ ಬರಲಿದೆ.
ಈ ಧಾರವಾಹಿ ಕೊಂಚ ಕಾಮಿಡಿ, ಕೊಂಚ ಯಶಸ್ಸಿನ ಕತೆ ಎರಡರ ಸಮ್ಮಿಲಿನವಾಗಲಿದೆ ಎಂದು ಸಾಧು ಹೇಳಿದ್ದಾರೆ. ವಿಶೇಷವೆಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೂಡಾ ತಮ್ಮ ಬ್ಯಾನರ್ ನಲ್ಲಿ ನೇತ್ರಾವತಿ ಎನ್ನುವ ಭಕ್ತಿಪ್ರಧಾನ ಧಾರವಾಹಿಯೊಂದನ್ನು ಉದಯ ಟಿವಿಗಾಗಿ ನಿರ್ಮಿಸುತ್ತಿದ್ದಾರೆ. ಇದೀಗ ಸಾಧು ಕೋಕಿಲಾ ಕೂಡಾ ಕಿರುತೆರೆಗೆ ವಿಶಿಷ್ಟ ಕಥಾನಕದ ಧಾರವಾಹಿಯೊಂದಿಗೆ ಎಂಟ್ರಿ ಕೊಡುತ್ತಿದ್ದಾರೆ.