Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆಸ್ಕರ್ ರೇಸ್ ನಲ್ಲಿ ಆರ್ ಆರ್ ಆರ್: ಇತಿಹಾಸದ ನಿರೀಕ್ಷೆಯಲ್ಲಿ ಭಾರತೀಯರು

ಆಸ್ಕರ್ ರೇಸ್ ನಲ್ಲಿ ಆರ್ ಆರ್ ಆರ್: ಇತಿಹಾಸದ ನಿರೀಕ್ಷೆಯಲ್ಲಿ ಭಾರತೀಯರು
ಹೈದರಾಬಾದ್ , ಭಾನುವಾರ, 12 ಮಾರ್ಚ್ 2023 (09:20 IST)
Photo Courtesy: Twitter
ಹೈದರಾಬಾದ್: ಆಸ್ಕರ್ ಭಾರತಕ್ಕೆ ಇದುವರೆಗೆ ಕನಸಾಗಿಯೇ ಉಳಿದಿತ್ತು. ಈ ಬಾರಿ ಆ ಕನಸು ನನಸಾಗುವ ನಿರೀಕ್ಷೆಯಲ್ಲಿ ಕೋಟ್ಯಾಂತರ ಭಾರತೀಯರಿದ್ದಾರೆ.

ಇಂದು ತಡರಾತ್ರಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, ಭಾರತದ ಆರ್ ಆರ್ ಆರ್ ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿದೆ. ಈ ಸಿನಿಮಾ ನಾಟ್ಟು ನಾಟ್ಟು ಹಾಡು ಪ್ರಶಸ್ತಿ ಗೆಲ್ಲುವ ಎಲ್ಲಾ ಭರವಸೆ ಭಾರತೀಯರದ್ದಾಗಿದೆ.

ನಾಳೆ ಮುಂಜಾನೆ ವೇಳೆಗೆ ಆಸ್ಕರ್ ಪ್ರಶಸ್ತಿ ಘೋಷಣೆ ಪೂರ್ಣವಾಗಲಿದ್ದು, ಇತಿಹಾಸ ಸೃಷ್ಟಿಯಾಗುವ ನಿರೀಕ್ಷೆಯಲ್ಲಿ ಭಾರತೀಯರಿದ್ದಾರೆ. ಆರ್ ಆರ್ ಆರ್ ಅಲ್ಲದೆ, ಚೆಲ್ಲೊ ಶೋ, ಆಲ್ ದೇಟ್ ಬ್ರೀತ್ಸ್ ಮತ್ತು ದಿ ಎಲಿಫೆಂಟ್ ವಿಸ್ಪರ್ಸ್ ಎಂಬ ಭಾರತೀಯ ಸಿನಿಮಾಗಳೂ ಸ್ಪರ್ಧೆಯಲ್ಲಿವೆ.

ಈ ಮೊದಲು ಭಾರತೀಯ ಮೂಲದ ಸ್ಲಮ್ ಡಾಗ್ ಮಿಲಿಯನೇರ್ ಸಿನಿಮಾ ಆಸ್ಕರ್ ಪ್ರಶಸ್ತಿ ಗೆದ್ದಿತ್ತು. ಆದರೆ ಇದು ಸಂಪೂರ್ಣವಾಗಿ ಭಾರತೀಯ ಸಿನಿಮಾವಾಗಿರಲಿಲ್ಲ. ಇದೀಗ ಆರ್ ಆರ್ ಆರ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸಿನಿಮಾಗಿದ್ದು, ಒಂದು ವೇಳೆ ಈ ಆಸ್ಕರ್ ಗೆದ್ದರೆ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಮೊದಲ ಸಂಪೂರ್ಣ ಭಾರತೀಯ ಸಿನಿಮಾ ಎಂಬ ಗೌರವಕ್ಕೆ ಪಾತ್ರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಬ್ಜ ಸಿನಿಮಾ ಯಾಕೆ ನೋಡಬೇಕು?