ಬೆಂಗಳೂರು: ಇನ್ನೇನು ಕೆಜಿಎಫ್ ಬಿಡುಗಡೆಗೆ ಮೂರೇ ದಿನ ಬಾಕಿಯಿದೆ. ಈಗಾಗಲೇ ಟಿಕೆಟ್ ಗಳು ಪ್ರಿ ಬುಕಿಂಗ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಇದರ ಬೆನ್ನಲ್ಲೇ ಕೆಜಿಎಫ್ ಎಂಬ ಲೋಕ ಸೃಷ್ಟಿಸಿದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮಾತನಾಡಿದ್ದಾರೆ.
ಕೆಜಿಎಫ್ ಮಾಡುವುದು ಸುಲಭವಾಗಿರಲಿಲ್ಲ. ಕಷ್ಟಪಟ್ಟು ಲೊಕೇಶನ್ ಹುಡುಕಿ ಇಲ್ಲಿಗೆ ಬಂದು ಎಲ್ಲಾ 80 ರ ದಶಕಕ್ಕೆ ತಕ್ಕಂತೆ ಸೆಟ್ ಹಾಕಲು ತಂತ್ರಜ್ಞರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಇಲ್ಲಿ ಶೂಟಿಂಗ್ ಮಾಡುವುದೂ ಸಾಹಸದ ಕೆಲಸವಾಗಿತ್ತು.
ಅಲ್ಲಿನ ಹವಾಗುಣ, ನೆಲ, ಬಿಸಿಲು, ಧೂಳು ನಿಜಕ್ಕೂ ಇಲ್ಲಿ ಶೂಟಿಂಗ್ ಮಾಡಿದ್ದೇ ಸಾಹಸ. ಒಂದು ಶಾಟ್ ನ್ನು ಐದು ನಿಮಿಷದೊಳಗೇ ಮುಗಿಸಬೇಕಿತ್ತು. ಅದೂ ಬರಿಗಾಲಿನಲ್ಲಿ ಇಲ್ಲಿನ ಮಣ್ಣಲ್ಲಿ ನಿಂತು ಶಾಟ್ ತೆಗೆಯಲು ಕಷ್ಟವಾಗುತ್ತಿತ್ತು. ನಿರ್ದೇಶಕರು, ತಂತ್ರಜ್ಞರು, ಕಲಾ ನಿರ್ದೇಶಕರು ಪ್ರತಿಯೊಬ್ಬರೂ ಈ ಸಿನಿಮಾ ಚೆನ್ನಾಗಿ ಬರಬೇಕು, ನಾವು ಏನೋ ಬೃಹತ್ ಕೆಲಸಕ್ಕೆ ಕೈ ಹಾಕಿದ್ದೇವೆ ಎಂಬ ಭಾವನೆಯಿಂದ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಸಿನಿಮಾ ನೋಡಲು ಬರುವ ಪ್ರೇಕ್ಷಕರು ತಲೆಯಲ್ಲಿ ತಮ್ಮದೇ ಕಲ್ಪನೆ ಇಟ್ಟುಕೊಂಡು ಬರುವುದು ಬೇಡ. ಹೊಸ ಮೂಡ್ ನಲ್ಲಿ ಸಿನಿಮಾ ನೋಡಬೇಕು ಎಂದು ಪ್ರೇಕ್ಷಕರಿಗೆ ಯಶ್ ಷರತ್ತು ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ