Select Your Language

Notifications

webdunia
webdunia
webdunia
webdunia

ಅನಂತ್ ಅಂಬಾನಿ ಮದುವೆಗೆ ಬಂದ ರಾಕಿಂಗ್ ಸ್ಟಾರ್ ಯಶ್ ಹೊಸ ಲುಕ್ ವೈರಲ್

Yash new look

Krishnaveni K

ಮುಂಬೈ , ಶುಕ್ರವಾರ, 12 ಜುಲೈ 2024 (20:43 IST)
Photo Credit: Facebook
ಮುಂಬೈ: ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆಯಲ್ಲಿ ಪಾಲ್ಗೊಳ್ಳಲು ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಸಮೇತ ಮುಂಬೈಗೆ ಬಂದಿದ್ದಾರೆ. ಈ ವೇಳೆ ಅವರ ಹೊಸ ಲುಕ್ ಎಲ್ಲರ ಗಮನ ಸೆಳೆದಿದೆ.

ರಾಕಿಂಗ್ ಸ್ಟಾರ್ ಯಶ್ ಕಳೆದ ಕೆಲವು ಸಮಯದಿಂದ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಅವರು ಬಹಳ ದಿನಗಳ ನಂತರ ಪಪ್ಪಾರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ಅವರು ಪಪ್ಪಾರಾಜಿಗಳತ್ತ ನಗು ನಗುತ್ತಲೇ ಕೈ ಬೀಸಿದರು. ಜೊತೆಗೆ ತಮ್ಮನ್ನು ಸುತ್ತುವರೆದ ಕ್ಯಾಮರಾ ಮ್ಯಾನ್ ಗಳಿಗೆ ಹುಷಾರು ಎಂದೂ ಕಾಳಜಿ ತೋರಿದರು.

ಆದರೆ ಯಶ್ ರ ಹೊಸ ಹೇರ್ ಸ್ಟೈಲ್ ಎಲ್ಲರ ಗಮನ ಸೆಳೆದಿದೆ. ಕೆಜಿಎಫ್ ಸಿನಿಮಾದಲ್ಲಿ ಯಶ್ ಉದ್ದನೆಯ ತಲೆಕೂದಲು ಬಿಟ್ಟುಕೊಂಡು ದಾಡಿ ಬಿಟ್ಟಿದ್ದರು. ಆದರೆ ಈಗ ಉದ್ದನೆಯ ಕೂದಲು ಕೊಂಚ ಟ್ರಿಮ್ ಆಗಿದೆ. ಆದರೆ ದಾಡಿ ಮಾತ್ರ ಹೊಸ ರೂಪದಲ್ಲಿ ಎಂದಿನಂತೇ ಇದೆ.

ಈ ಹೊಸ ಲುಕ್ ನಲ್ಲಿ ಯಶ್ ಇನ್ನೂ ಯಂಗ್ ಆಗಿ ಕಾಣುತ್ತಿದ್ದಾರೆ. ಟಾಕ್ಸಿಕ್ ಸಿನಿಮಾಗಾಗಿ ಯಶ್ ಈ ಲುಕ್ ಮಾಡಿಸಿಕೊಂಡಿರಬಹುದು ಎನ್ನಲಾಗಿದೆ. ಸದ್ಯಕ್ಕೆ ಟಾಕ್ಸಿಕ್ ಸಿನಿಮಾ ಕೆಲಸಗಳು ನಡೆಯುತ್ತಿದೆ. ಇದಕ್ಕಾಗಿ ಯಶ್ ಸಾಕಷ್ಟು ತಯಾರಿ ಮಾಡಿಕೊಂಡಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

68th Films Fare Awards: 68 ನೇ ಫಿಲ್ಮ್ ಫೇರ್ ಅವಾರ್ಡ್ಸ್ ಘೋಷಣೆ: ಪ್ರಶಸ್ತಿ ಗೆದ್ದವರ ಲಿಸ್ಟ್ ಇಲ್ಲಿದೆ