ರಿಯಲ್ ಸ್ಟಾರ್ ಉಪೇಂದ್ರ ಇತ್ತೀಚೆಗೆ ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿದ್ದಾರೆ. ಪ್ರಜಾಕಾರಣದ ಹೊಸ ಪರಿಕಲ್ಪನೆ ಮುಂದಿಟ್ಟಿರುವ ಉಪೇಂದ್ರ ಸಿನಿಮಾ ನಿರ್ದೇಶಿಸುವುದರ ಹಿಂದೆ ರಾಜಕೀಯಕ್ಕೆ ಬರುವ ದೂರದೃಷ್ಟಿ ಇತ್ತು ಎಂಬುದು ಅವರ ಸಿನಿಮಾಗಳಲ್ಲಿ ಗೊತ್ತಾಗುತ್ತೆ.
ಓಂಕಾರ, ಎ, ಉಪೇಂದ್ರ, ರಕ್ತ ಕಣ್ಣೀರು ಸೇರಿದಂತೆ ಅವರ ಹಲವು ಚಿತ್ರಗಳಲ್ಲಿ ರಾಜಕೀಯ ವಿಡಂಬನೆ ಕಂಡುಬರುತ್ತದೆ. ರಾಜಕೀಯ ವ್ಯವಸ್ಥೆ ಬಗ್ಗೆ ತಮ್ಮ ಚಿತ್ರಗಳಲ್ಲಿ ಉಪೇಂದ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ರಾಜಕಾರಣಿಗಳು ತಮಗೆ ಮತ ಹಾಕಿದ ಜನರ ಬಗ್ಗೆ ತೋರಿಸುವ ಅಸಡ್ಡೆ ಬಗ್ಗೆ ತೆರೆ ಮೇಲೆ ಬಿಚ್ಚಿಡುತ್ತಿದ್ದರು. ಉಪೇಂದ್ರ ಅವರ ಈ ರಾಜಕೀಯದ ಮೇಲಿನ ವಿಡಂಬನೆ ಅವರ ಇಂದಿನ ರಾಜಕೀಯದ ಎಂಟ್ರಿಯ ಮುನ್ನುಡಿಯಾಗಿತ್ತು ಎಂಬುದು ಸ್ಪಷ್ಟವಾಗಿದೆ.
ಈ ವಾದಕ್ಕೆ ಪುಷ್ಠಿ ನೀಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಎಲ್ಲವುದರ ಬಗ್ಗೆ ನೇರಾನೇರ ಮಾತನಾಡುವ ಉಪೇಂದ್ರ ಎಚ್2ಓ ಸಿನಿಮಾ ಬಿಡುಗಡೆ ಸಂದರ್ಭ ಕಾರ್ಯಕ್ರಮವೊಂದರಲ್ಲಿ ನಮ್ಮ ಗುರಿ ಬೇರೆ ಇದೆ. ಸಿನಿಮಾ ಅಲ್ಲ ಎಂದು ಹೇಳುವ ಮೂಲಕ 16 ವರ್ಷಗಳ ಹಿಂದೆಯೇ ಪ್ರಜಾಕೀಯದ ಸೂಚನೆ ಕೊಟ್ಟಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ