Webdunia - Bharat's app for daily news and videos

Install App

ಯುಐ ಸಿನಿಮಾದ ಮತ್ತೊಂದು ಹಾಡು ಲಾಂಚ್ ಮಾಡ್ತಿದ್ದಾರೆ ಉಪೇಂದ್ರ

Krishnaveni K
ಸೋಮವಾರ, 26 ಫೆಬ್ರವರಿ 2024 (12:58 IST)
Photo Courtesy: Twitter
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಯುಐ ಸಿನಿಮಾದ ಮತ್ತೊಂದು ಹಾಡನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ನಿರ್ದೇಶಿಸುತ್ತಾರೆ ಎಂದರೆ ಅದರಲ್ಲಿ ಏನೋ ಸ್ಪೆಷಲ್ ಇರಲೇಬೇಕು ಎಂದು ಅಭಿಮಾನಿಗಳು ಕಾದಿರುತ್ತಾರೆ. ಅವರ ಸಿನಿಮಾ ಹಾಡುಗಳೂ, ಅದರ ಸಾಹಿತ್ಯವೂ ಅಷ್ಟೇ. ವಿಶೇವಾಗಿಯೇ ಇರುತ್ತದೆ. ಇದೀಗ ಉಪೇಂದ್ರ ಮತ್ತೊಂದು ಹಾಡಿನ ಬಿಡುಗಡೆ ದಿನಾಂಕ ಪ್ರಕಟಿಸಿದ್ದಾರೆ.

ಯುಐ ಸಿನಿಮಾದ ಚೀಪ್ ಸಾಂಗ್ ಪ್ರೋಮೋ ಈಗಾಗಲೇ ವೈರಲ್ ಆಗಿತ್ತು. ಎಲ್ಲಾ ಚೀಪ್ ಚೀಪ್ ಎನ್ನುವ ವಿಶಿಷ್ಟ ಸಾಲಿನ ಹಾಡು ಇಂದು ಬಿಡುಗಡೆ ಮಾಡುತ್ತಿದ್ದಾರೆ. ಅದರ ಬೆನ್ನಲ್ಲೇ ಈಗ ಉಪೇಂದ್ರ ಮತ್ತೊಂದು ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

ಮಾರ್ಚ್ 4 ರಂದು ಯುಐ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಲಿದೆ. ತಮ್ಮದೇ ಶೈಲಿಯಲ್ಲಿ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಚೀಪ್ ಚೀಪ್ ಏನದು? ದೊಡ್ಡದು.. ಚಿಕ್ಕದು..ಯಾರದ್ದು? ಇದು ಬಹಳ ಸೂಕ್ಷ್ಮವಾದ ವಿಷಯ. ಯಾರದ್ದು ಚಿಕ್ಕದು? ಯಾರದ್ದು ದೊಡ್ಡದು? ಎಂಬ ವಿಷಯ ಬಹಿರಂಗವಾದರೆ ಅದಾಗಿ ಹೋಗುತ್ತದೆ.. ಏನು ಅದು? ಅದು ಏನಾಗುತ್ತದೆ? ಏನಾಗುತ್ತದೆ ಎಂದು ಮಾರ್ಚ್ 4 ನೇ ತಾರಿಕು ಇನ್ನೊಂದು ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾದಾಗ ನಿಮಗೆ ಗೊತ್ತಾಗುತ್ತದೆ’ ಎಂದು ಉಪೇಂದ್ರ ಬರೆದುಕೊಂಡಿದ್ದಾರೆ.

ಉಪೇಂದ್ರ ಅವರ ಈ ಸಂದೇಶ ನೋಡಿ ನೆಟ್ಟಿಗರು ಈ ಥರಾ ಜನರ ತಲೆಗೆ ಹುಳಬೇಡಿ. ಮೊದಲು ವಿಷಯ ಏನಂತ ಹೇಳಿ ಎಂದು ಕಾಮೆಂಟ್ ಮಾಡಿದ್ದಾರೆ. ಟೀಸರ್ ಪ್ರೋಮೋದಿಂದ ಹಿಡಿದು ಯುಐ ಸಿನಿಮಾದ ಎಲ್ಲಾ ಅಪ್ ಡೇಟ್ ವಿಚಾರದಲ್ಲೂ ಉಪೇಂದ್ರ ತಮ್ಮದೇ ಶೈಲಿಯಲ್ಲಿ ಜನರ ತಲೆ ಕೆರೆದುಕೊಳ್ಳುವಂತೆ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments