ರಿಯಲ್ ಸ್ಟಾರ್ ಉಪೇಂದ್ರ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಅವರು ಓಂ 2, ಶ್ 2 ಚಿತ್ರಗಳನ್ನು ಮಾಡಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಅದೇ ರೀತಿ ತಾನು ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಜತೆಗೂ ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದಿದ್ದಾರೆ.
ಉಪ್ಪಿ 2 ಚಿತ್ರದ ಬಳಿಕ ಉಪೇಂದ್ರ ನಿರ್ದೇಶಿಸಲಿರುವ ಮುಂದಿನ ಚಿತ್ರಗಳ ಬಗ್ಗೆ ಸಾಕಷ್ಟು ಊಹಾಪೋಹಗಳು ಅಭಿಮಾನಿ ವಲಯದಲ್ಲಿ ಹರಿದಾಡುತ್ತಿವೆ. ಅವರು ಓಂ 2, ಶ್ 2 ಮಾಡಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು.
ತಾನು ಆ ರೀತಿಯ ಯಾವುದೇ ಚಿತ್ರ ಮಾಡುತ್ತಿಲ್ಲ. ಇವೆಲ್ಲಾ ಕೇವಲ ವದಂತಿಗಳಷ್ಟೇ ಎಂದು ಉಪ್ಪಿ ಸ್ಪಷ್ಟಪಡಿಸಿದ್ದಾರೆ. ಏನೇ ಆಗಲಿ ಉಪೇಂದ್ರ ನಿರ್ದೇಶನದ ಚಿತ್ರಗಳನ್ನು ಪ್ರೇಕ್ಶಕ ಯಾವಾಗಲೂ ನಿರೀಕ್ಷಿಸುತ್ತಿರುತ್ತಾನೆ. ಆದಷ್ಟು ಬೇಗ ಉಪ್ಪಿದಾದಾ ಆಕ್ಷನ್ ಕಟ್ ಹೇಳಲಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.