ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾಗೆ ನಂಟಿದೆ ಎಂಬ ಅನುಮಾನದಲ್ಲಿ ಬಂಧಿತನಾಗಿರುವ ನಟಿ ರಾಗಿಣಿ ದ್ವಿವೇದಿ ಸ್ನೇಹಿತ ರವಿಶಂಕರ್ ಬಗ್ಗೆ ಬೆಚ್ಚಿಬೀಳಿಸುವ ಮಾಹಿತಿಗಳು ಹೊರಬಿದ್ದಿವೆ.
ಆರ್ ಟಿಒ ಕಚೇರಿಯಲ್ಲಿ ದ್ವಿತೀಯ ದರ್ಜೆಯ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರೂ ರವಿಶಂಕರ್ ಸಾಕಷ್ಟು ಹಣ ಸಂಪಾದನೆ ಮಾಡುತ್ತಿದ್ದ. ಆತ ರಾಗಿಣಿಗಾಗಿ ದಿನವೊಂದಕ್ಕೆ ಪ್ರತಿನಿತ್ಯ 1 ಲಕ್ಷ ರೂ. ಖರ್ಚು ಮಾಡುತ್ತಿದ್ದ ಎನ್ನಲಾಗಿದೆ!
ದುಬಾರಿ ಡ್ರೆಸ್, ಕಾರಿನಲ್ಲಿ ಓಡಾಡುತ್ತಾ ವೈಭವದ ಜೀವನ ಮಾಡುತ್ತಿದ್ದ. ಜತೆಗೆ ಹೈ ಫೈ ಪಾರ್ಟಿಗಳಿಗೆ ಅಟೆಂಡ್ ಆಗುತ್ತಿದ್ದ ಎಂಬಿತ್ಯಾದಿ ಮಾಹಿತಿಗಳು ವಿಚಾರಣೆ ವೇಳೆ ಬಹಿರಂಗವಾಗಿದೆ.