ಮುಂಬೈ: ಪುಷ್ಪ ಸಿನಿಮಾದಲ್ಲಿ ಶ್ರೀವಲ್ಲಿ ಆಗಿ ಮಿಂಚಿದ್ದ ರಶ್ಮಿಕಾ ಮಂದಣ್ಣ ಎಲ್ಲರಿಗೂ ಇಷ್ಟವಾಗಿದ್ದರು. ಆ ಸಿನಿಮಾದಲ್ಲಿ ಶ್ರೀವಲ್ಲಿ ಹಾಡಿನಲ್ಲಿ ರಶ್ಮಿಕಾ ತೊಟ್ಟಿದ್ದ ಸೀರೆ ಪಾಪ್ಯುಲರ್ ಆಗಿತ್ತು.
ಶ್ರೀವಲ್ಲಿ ಹಾಡಿನಲ್ಲಿ ರಶ್ಮಿಕಾ ಹಸಿರು ಬ್ಲೌಸ್, ಕೆಂಪು ಬಣ್ಣದ ತೆಳು ಜರಿಯುಳ್ಳ ಸೀರೆಯುಟ್ಟಿದ್ದರು. ಈ ಸೀರೆ ಹೆಣ್ಣು ಮಕ್ಕಳ ಗಮನ ಸೆಳೆದಿತ್ತು.
ಇದೀಗ ರಾಜಸ್ಥಾನ್ ನಲ್ಲಿ ಇಂತಹದ್ದೇ ಸೀರೆ ಮಾರುಕಟ್ಟೆಗೆ ಬಂದಿದೆ. ಇದಕ್ಕೆ ಶ್ರೀವಲ್ಲಿ ಸೀರೆ ಎಂದು ಹೆಸರಿಡಲಾಗಿದ್ದು, ಭಾರೀ ಪಾಪ್ಯುಲರ್ ಆಗಿದೆ.