ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತಮ್ಮ ಗೆಳತಿಯ ಮದುವೆಯಲ್ಲಿ ಪಾಲ್ಗೊಂಡ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಪ್ಪಟ ಕೊಡವ ಸೀರೆಯಲ್ಲಿ ಮಿಂಚಿರುವ ರಶ್ಮಿಕಾ ತಮ್ಮ ಹಳೆಯ ಗೆಳತಿಯರೊಂದಿಗೆ ಫೋಟೋಗೆ ಪೋಸ್ ಕೊಟ್ಟು ಖುಷಿಪಟ್ಟಿದ್ದಾರೆ. ವಿಮಾನ ನಿಧಾನವಾದರೂ ಬೆಳಗಿನ ಜಾವವೇ ಕಷ್ಟಪಟ್ಟು ಮದುವೆಯಲ್ಲಿ ಪಾಲ್ಗೊಳ್ಳಲು ಬಂದೆ. ನನ್ನ ಗೆಳತಿ ಮದುವೆಯಲ್ಲಿ ಪಾಲ್ಗೊಂಡು ಹಳೆಯ ಗೆಳತಿಯರನ್ನೆಲ್ಲಾ ಭೇಟಿ ಮಾಡಿದೆ ಎಂದಿದ್ದಾರೆ ರಶ್ಮಿಕಾ.
ರಶ್ಮಿಕಾಗೆ ಜಂಬ ಜಾಸ್ತಿ ಎನ್ನುವವರಿದ್ದಾರೆ. ಆದರೆ ಈ ಫೋಟೋ ಪ್ರಕಟಿಸಿರುವ ರಶ್ಮಿಕಾ, ಮೊದಲಿನಿಂದಲೂ ರಶ್ಮಿಕಾ ಎಂದರೆ ಇರುವುದು ಹೀಗೆ. ಈಗಲೂ ಹಾಗೆಯೇ ಇದ್ದೇನೆ ಎಂದಿದ್ದಾರೆ.