ಹೈದರಾಬಾದ್ : ನಟ ರಾಣಾ ದಗ್ಗುಬಾಟಿ ಅವರು ನಾಯಕನಿಗಿಂತಲೂ ಉತ್ತಮವಾಗಿ ಖಳನಾಯಕ, ಪೋಷಕ ಪಾತ್ರಗಳನ್ನು ಮಾಡುತ್ತಾರೆ. ಆದಕಾರಣ ಬ್ಯೂಸಿಯಾಗಿರುವ ನಟರಲ್ಲಿ ಇವರು ಕೂಡ ಒಬ್ಬರು.
ಇತ್ತೀಚೆಗೆ ರಾಣಾ ಅವರು ಶೋಭನ್ ಬಾಬು ಅವರ ಜೀವನಚರಿತ್ರೆಯಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಕೊರೊನಾದಿಂದ ಶೂಟಿಂಗ್ ಸ್ಥಗಿತಗೊಂಡಿದ್ದು, ಈಗ ಆರಂಭವಾಗಿದೆ. ರಾಣಾ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳ ಪೂರ್ಣಗೊಳಿಸುವ ಉದ್ದೇಶದಿಂದ ಆ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಹಾಗಾಗಿ ರಾಣಾ ಅವರು ಯಾವುದೇ ಪ್ರಾಜೆಕ್ಟ್ ಮಾಡಲು ಸಿದ್ಧರಿಲ್ಲ. ಆದಕಾರಣಶೋಭನ್ ಬಾಬು ಅವರ ಬಯೋಫಿಕ್ ಕೂಡ ಮಾಡಲು ಸಾಧ್ಯವಿಲ್ಲ ಎಂದು ನಿರ್ಮಾಪಕರಿಗೆ ಹೇಳಿದ್ದಾರೆ ಎಂಬ ಮಾತು ಕೇಳಿಬಂದಿದೆ.