ಬಾಹುಬಲಿ ಯಶಸ್ಸಿನ ಬಳಿಕ ತೆಲುಗಿನ ಖ್ಯಾತ ನಟ ರಾಣಾ ದಗ್ಗುಬಾಟಿ ನೇನೆ ರಾಜು ನೇನೆ ಮಂತ್ರಿ ಚಿತ್ರದ ಮೂಲಕ ಟಾಲಿವುಡ್`ನಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ.
ತೇಜ ನಿರ್ದೇಶಿಸಿರುವ ಈ ಚಿತ್ರದಲ್ಲಿ ರಾಣಾ ಜೋಗಿಂದರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಕಾಜಲ್ ಅಗರ್ ವಾಲ್, ರಾಣಾಗೆ ಜೋಡಿಯಾಗಿದ್ಧಾರೆ. ತನ್ನದೇ ಆದ ರೀತಿಯಲ್ಲಿ ನ್ಯಾಯ ಒದಗಿಸುವ ಖಡಕ್ ವ್ಯಕ್ತಿಯ ಪಾತ್ರದಲ್ಲಿ ರಾಣಾಕಾಣಿಸಿಕೊಂಡಿದ್ದಾರೆ. ಚಿತ್ರದ ಟ್ರೇಲರ್ ಟ್ರೇಲರ್ ರಿಲೀಸ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಲೀಡರ್ ಚಿತ್ರದಲ್ಲಿ ಗಮನ ಸೆಳೆದಿದ್ದ ರಾಣಾ ದಗ್ಗುಬಾಟಿ ಈ ಚಿತ್ರದಲ್ಲಿ ಮುಖ್ಯಮಂತ್ರಿಗೇ ಸವಾಲು ಹಾಕುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಹುಬಲಿ ಬಳಿಕ ಪ್ರಭಾಸ್ ಮತ್ತು ರಾಣಾ ಇಬ್ಬರೂ ಮತ್ತೊಂದು ಬ್ಲಾಕ್ ಬಸ್ಟರ್ ಚಿತ್ರಗಳ ಮೂಲಕ ಸುದ್ದಿಯಾಗಿದ್ದಾರೆ. ಪ್ರಭಾಸ್ ಸಾಹೋ ಎಂಬ ಬಿಗ್ ಬಜೆಟ್ ಚಿತ್ರದ ಮೂಲಕ ತೆರೆಗೆ ಅಪ್ಪಳಿಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ