ಬೆಂಗಳೂರು: ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಕ್ರಿಸ್ ಮಸ್ ದಿನ ತಮ್ಮ ಅಭಿಮಾನಿಗಳಿಗೆ ನಿಜಕ್ಕೂ ಸರ್ಪೈಸ್ ಕೊಟ್ಟಿದ್ದಾರೆ.
ಕಿರಿಕ್ ಪಾರ್ಟಿ ಸಿನಿಮಾದ ಬೆಳಗೆದ್ದು ಹಾಡು ಯೂ ಟ್ಯೂಬ್ ನಲ್ಲಿ 100 ಮಿಲಿಯನ್ ವ್ಯೂ ದಾಟಿದ ಖುಷಿಯನ್ನು ಟ್ವೀಟ್ ಮಾಡಿರುವ ರಶ್ಮಿಕಾ ಟ್ವೀಟ್ ಜೊತೆಗೆ ರಕ್ಷಿತ್ ಹೆಸರನ್ನೂ ಟ್ಯಾಗ್ ಮಾಡಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಬೆಳಗೆದ್ದು ನನ್ನ ಮೊದಲ ಹಾಡು. ಇದು 100 ಮಿಲಿಯನ್ ದಾಟಿರುವುದು ನಿಜಕ್ಕೂ ಖುಷಿಯ ವಿಚಾರ. ಈ ಹಾಡನ್ನು ಚಿತ್ರೀಕರಿಸಿದ ದಿನಗಳನ್ನು ಮರೆಯಲಾರೆ. ಆ ನೆನಪುಗಳು ಸದಾ ಶಾಶ್ವತ. ನನ್ನೊಳಗಿನ ಸಾನ್ವಿಯನ್ನು ಪಡೆದ ಗಳಿಗೆ. ಆಹಾ.. ಆ ಪಯಣವೇ ಅದ್ಭುತ ಎಂದು ಬರೆದುಕೊಂಡಿರುವ ರಶ್ಮಿಕಾ ರಿಷಬ್ ಶೆಟ್ಟಿ, ಪರಂವಾ ಸ್ಟುಡಿಯೋ, ಸಂಯುಕ್ತ ಹೆಗ್ಡೆ ಹೆಸರಿನ ಜೊತೆಗೆ ರಕ್ಷಿತ್ ಶೆಟ್ಟಿ ಟ್ವಿಟರ್ ಖಾತೆಯನ್ನೂ ಟ್ಯಾಗ್ ಮಾಡಿದ್ದಾರೆ. ಇದಕ್ಕೂ ಮೊದಲು ಇದೇ ವಿಚಾರಕ್ಕೆ ರಕ್ಷಿತ್ ಟ್ವೀಟ್ ಮಾಡುವಾಗ ರಶ್ಮಿಕಾ ಹೆಸರನ್ನು ಉಲ್ಲೇಖಿಸದೇ ಟ್ರೋಲ್ ಗೊಳಗಾಗಿದ್ದರು. ಆದರೆ ರಶ್ಮಿಕಾ ರಕ್ಷಿತ್ ರನ್ನು ಮರೆಯದೇ ಟ್ಯಾಗ್ ಮಾಡಿರುವುದಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ.