Select Your Language

Notifications

webdunia
webdunia
webdunia
webdunia

ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟನಿ ಇಂದಿನಿಂದ ಶೂಟಿಂಗ್ ಶುರು

Rakshit Shetty

Krishnaveni K

ಉಡುಪಿ , ಬುಧವಾರ, 1 ಮೇ 2024 (11:36 IST)
ಉಡುಪಿ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ರಿಚರ್ಡ್ ಆಂಟನಿ ಸಿನಿಮಾ ಇಂದಿನಿಂದ ಉಡುಪಿಯಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ.

ಕಾರ್ಮಿಕರ ದಿನದಂದೇ ರಕ್ಷಿತ್ ಹೊಸ ಸಿನಿಮಾಗೆ ಚಾಲನೆ ಸಿಗುತ್ತಿರುವುದು ವಿಶೇಷ. ರಿಷಬ್ ಶೆಟ್ಟಿಯಂತೆ ರಕ್ಷಿತ್ ಕೂಡಾ ಈ ಬಾರಿ ತಮ್ಮ ಸಿನಿಮಾವನ್ನು ಹುಟ್ಟೂರಿನಲ್ಲೇ ಮಾಡಲು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಉಡುಪಿಯ ತಮ್ಮ ತವರಿನಲ್ಲಿ ವಿಶೇಷ ಸೆಟ್ ಹಾಕಿಕೊಂಡಿದ್ದಾರೆ.

ಇದು 90 ರ ದಶಕದ ಕತೆ ಹೊಂದಿರುವ ಕಾರಣ ಆ ಕಾಲಕ್ಕೆ ತಕ್ಕಂತೆ ಸೆಟ್ ಹಾಕಲಾಗಿದೆ. ಮೊನ್ನೆಯಷ್ಟೇ ಉಡುಪಿಯಲ್ಲಿ ಮತ ಚಲಾಯಿಸಿದ್ದ ರಕ್ಷಿತ್ ಶೆಟ್ಟಿ ಇಲ್ಲಿ ಸ್ಥಳೀಯ ಕಲಾವಿದರಿಗೇ ಆದ್ಯತೆ ನೀಡಲಾಗುವುದು ಎಂದಿದ್ದರು. ಈ ಸಿನಿಮಾದಲ್ಲಿ ಬೆಂಗಳೂರಿನ ಕಲಾವಿದರು ಇರಲ್ಲ ಎಂದಿದ್ದಾರೆ.

ಕನ್ನಡ ಸಿನಿಮಾ ರಂಗದಲ್ಲಿ ನಿರ್ದೇಶನ ಮತ್ತು ನಟನಾಗಿ ತಮ್ಮದೇ ಛಾಪು ಮೂಡಿಸಿರುವ ಕೆಲವೇ ಕೆಲವು ಕಲಾವಿದರಲ್ಲಿ ರಕ್ಷಿತ್ ಕೂಡಾ ಒಬ್ಬರು. ಇದೀಗ ಹಲವು ದಿನಗಳ ನಂತರ ರಕ್ಷಿತ್ ನಿರ್ದೇಶನದತ್ತ ಮುಖಮಾಡಿದ್ದಾರೆ. ಈ ಸಿನಿಮಾಗೆ ಹೊಂಬಾಳೆ ಫಿಲಂಸ್ ಬಂಡವಾಳ ಹೂಡಲಿದೆ ಎಂಬ ಸುದ್ದಿಯಿದೆ. ಸದ್ಯದಲ್ಲೇ ಇದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ಸಿನಿಮಾಗಾಗಿ ಫಿಲಂ ಸಿಟಿ ಮೀರಿಸುವಂತಹ ಸೆಟ್ ಹಾಕಿದ್ದಾರಂತೆ ರಿಷಬ್ ಶೆಟ್ಟಿ




X
X
X
X