ಚೆನ್ನೈ: ರಜನೀಕಾಂತ್ ಕಬಾಲಿ ಚಿತ್ರ ಸಾಕಷ್ಟು ಹವಾ ಎಬ್ಬಿಸಿತ್ತು. ಅದೇ ಕಬಾಲಿ ಚಿತ್ರದ ಎರಡನೇ ಭಾಗ ತೆರೆಗೆ ಬರಲಿದೆಯಂತೆ. ರಜನಿ ಒಪ್ಪಿದರೆ ನಿರ್ಮಾಪಕರು ಚಿತ್ರ ಮಾಡುವುದಕ್ಕೆ ರೆಡಿಯಾಗಿದ್ದಾರೆ.
ಕಲೈಪುಲಿ ಎಸ್ ತನು ಕಬಾಲಿ 2 ನಿರ್ಮಾಣ ಮಾಡುವ ಚಿಂತನೆ ನಡೆಸಿದ್ದಾರಂತೆ. ಆದರೆ ರಜನೀಕಾಂತ್ ಇನ್ನೂ ಹಸಿರು ನಿಶಾನೆ ತೋರಿಲ್ಲ. ಚಿತ್ರದ ಟೈಟಲ್ ಈಗಾಗಲೇ ಫಿಲಂ ಚೇಂಬರ್ ನಲ್ಲಿ ರಿಜಿಸ್ಟರ್ ಆಗಿದೆಯಂತೆ. ಚಿತ್ರಕ್ಕೆ ಸಂಬಂಧಿಸಿದ ಸಂಪೂರ್ಣ ತಯಾರಿ ನಡೆಸಿದ ನಂತರ ರಜನಿ ತಮ್ಮ ನಿರ್ಧಾರ ತಿಳಿಸಬಹುದು ಎನ್ನಲಾಗಿದೆ.
ಎಲ್ಲಾ ಓಕೆ ಆದರೆ ಮುಂದಿನ ವರ್ಷ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ. ರಜನಿ ಸದ್ಯಕ್ಕೆ ಎಂಥಿರಾನ್ ಭಾಗ ಎರಡರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದು ಮುಗಿದ ನಂತರ ಈ ಚಿತ್ರದ ಬಗೆಗೆ ತೀರ್ಮಾನ ತೆಗೆದುಕೊಳ್ಳಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ