ಚೆನ್ನೈ: ಪೆರಿಯಾರ್ ಕುರಿತು ತಮ್ಮ ಹೇಳಿಕೆ ಬಗ್ಗೆ ದ್ರಾವಿಡ ಸಂಘಟನೆಗಳ ಪ್ರತಿರೋಧದ ನಡುವೆಯೂ ತಾವು ಕ್ಷಮೆ ಕೇಳಲ್ಲ ಎಂದು ಸೂಪರ್ ಸ್ಟಾರ್ ರಜನೀಕಾಂತ್ ಸ್ಪಷ್ಟಪಡಿಸಿದ್ದಾರೆ.
ಸಮಾಜ ಸುಧಾರಕ ಪೆರಿಯಾರ್ 1971 ರಲ್ಲಿ ನಡೆಸಿದ್ದ ರ್ಯಾಲಿಯಲ್ಲಿ ರಾಮ-ಸೀತೆ ವಿಗ್ರಹಗಳನ್ನು ವಿವಸ್ತ್ರವಾಗಿ ಮೆರವಣಿಗೆ ಮಾಡಲಾಗಿತ್ತು ಎಂದು ರಜನಿ ಹೇಳಿದ್ದರು. ಆದರೆ ಈ ವಾದ ಶುದ್ಧ ಸುಳ್ಳು ಎಂದು ದ್ರಾವಿಡ ಸಂಘಟನೆಯೊಂದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ತಪ್ಪು ಮಾಹಿತಿ ನೀಡಿದ್ದಕ್ಕೆ ರಜನಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿತ್ತು.
ಆದರೆ ಈ ಘಟನೆ ಬಗ್ಗೆ ನಾನು ಕೇಳಿದ್ದೇನೆ ಮತ್ತು ಮಾಹಿತಿ ಓದಿದ್ದೇನೆ. ನಾನು ತಪ್ಪು ಮಾಹಿತಿ ನೀಡಿಲ್ಲ. ಹೀಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ರಜನಿ ಸ್ಪಷ್ಟಪಡಿಸಿದ್ದಾರೆ. ರಜನಿ ಪರ ಮತ್ತು ವಿರೋಧವಾಗಿ ಈಗ ಟ್ವಿಟರಿನಲ್ಲಿ ಭಾರೀ ಚರ್ಚೆಯಾಗುತ್ತಿದೆ.