ಬೆಂಗಳೂರು: ಸ್ಯಾಂಡಲ್ ವುಡ್ ನಟಿಯರು ಪರಭಾಷೆಗೆ ವಲಸೆ ಹೋಗುವುದು ಹೊಸದೇನಲ್ಲ. ಇದೀಗ ನಟಿ ರಾಗಿಣಿ ದ್ವಿವೇದಿ ತಮಿಳು ಸಿನಿಮಾವೊಂದನ್ನು ಒಪ್ಪಿಕೊಂಡ ಸುದ್ದಿ ಬಂದಿದೆ.
ಡ್ರಗ್ಸ್ ಪ್ರಕರಣದ ಬಳಿಕ ಚಿತ್ರರಂಗದಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದ ರಾಗಿಣಿ ಈಗ ತಮಿಳಿನಲ್ಲಿ ಒನ್ ಟು ಒನ್ ಎಂಬ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಸಂಕ್ರಾಂತಿ ಹಬ್ಬದಂದು ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿದ್ದು, ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ ಇದಾಗಿರಲಿದ್ದು, ರಾಗಿಣಿ ಪಾತ್ರವೂ ಅದಕ್ಕೆ ತಕ್ಕಂತೇ ಇದೆ ಎನ್ನಲಾಗಿದೆ.