ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿಯವರ ಸಿಸಿಬಿ ಕಸ್ಟಡಿ ಇಂದಿಗೆ ಅಂತ್ಯವಾಗುತ್ತಿದ್ದು, ಮಧ್ಯಾಹ್ನ 1 ಗಂಟೆಗೆ ಜಡ್ಜ್ ಮುಂದೆ ಹಾಜರುಪಡಿಸಲಾಗುತ್ತಿದೆ.
ಮೂರು ದಿನಗಳಿಂದ ಸಿಸಿಬಿ ಕಸ್ಟಡಿಯಲ್ಲಿರುವ ರಾಗಿಣಿ ತಮ್ಮ ಮೇಲಿರುವ ಆರೋಪಗಳನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ಸಿಸಿಬಿ ಪೊಲೀಸರು ಯಾವ ರೀತಿ ಸಾಕ್ಷ್ಯ ಒದಗಿಸುತ್ತಾರೆನ್ನುವುದರ ಮೇಲೆ ಅವರ ಮುಂದಿನ ಭವಿಷ್ಯ ಅಡಗಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಜಾಮೀನು ಸಿಗುವುದು ಕಷ್ಟ ಎನಿಸಿದರೂ ಸಿಸಿಬಿ ಪೊಲೀಸರು ಸಾಕ್ಷ್ಯ ಸಂಗ್ರಹಿಸುವುದರ ಮೇಲೆ ಎಲ್ಲವೂ ನಿರ್ಧರವಾಗಲಿದೆ. ಹೀಗಾಗಿ ರಾಗಿಣಿಗೆ ಇಂದು ಮಹತ್ವದ ದಿನವಾಗಲಿದೆ.