ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ರ ಮತ್ತೊಂದು ಮುಖವನ್ನು ರಾಧಿಕಾ ಪಂಡಿತ್ ಬಯಲು ಮಾಡಿದ್ದಾರೆ. ಮಗಳ ಕಣ್ಣಲ್ಲಿ ನೀರು ನೋಡಿ ತಾವೂ ಕಣ್ಣೀರು ಹಾಕಿದ ಘಟನೆಯನ್ನು ರಾಧಿಕಾ ರಸವತ್ತಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಮುದ್ದು ಮಗಳು ಐರಾಗೆ ಕಿವಿ ಚುಚ್ಚಿಸುವ ಶಾಸ್ತ್ರ ಮಾಡಿದ್ದಾರಂತೆ ರಾಕಿಂಗ್ ದಂಪತಿ. ಈ ಸಂದರ್ಭದಲ್ಲಿ ಮಗಳು ನೋವಾಯಿತೆಂದು ಅತ್ತು ಕರೆದಾಗ ತಾವೂ ಕಣ್ಣೀರು ಹಾಕಿದ್ದಾರಂತೆ ಯಶ್!
‘ಐರಾಗೆ ಕಿವಿ ಚುಚ್ಚಿಸುವ ಶಾಸ್ತ್ರ ಮಾಡಿದೆವು. ಎಲ್ಲಾ ಹೆತ್ತವರಿಗೂ ಇದು ಕಷ್ಟದ ಸಮಯ. ಅವಳು ಅಳುವಾಗ ನಮಗೆ ಕರುಳು ಹಿಂಡಿದಂತಾಗುತ್ತಿತ್ತು. ಇದೇ ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ಕಣ್ಣಲ್ಲಿ ನೀರು ನೋಡಿದೆ! ಅವರಿಬ್ಬರ ಬಾಂಧವ್ಯ ಎಷ್ಟು ಮಹತ್ವದ್ದು ಎಂದು ನನಗೆ ಅರಿವಾಗಿದೆ. ಚಿಂತೆ ಮಾಡ್ಬೇಡಿ, ತಂದೆ ಮತ್ತು ಮಗಳು ಇಬ್ಬರೂ ಕ್ಷೇಮವಾಗಿದ್ದಾರೆ!’ ಎಂದು ರಾಧಿಕಾ ತಮಾಷೆಯಾಗಿ ಬರೆದಿದ್ದಾರೆ.