ಬೆಂಗಳೂರು: ಫೈಟರ್ ವಿವೇಕ್ ದುರಂತ ಸಾವಿನ ವಿಚಾರಣೆಗೆ ಸಂಬಂಧಿಸಿದಂತೆ ಲವ್ ಯೂ ರಚ್ಚೂ ಸಿನಿಮಾದ ನಾಯಕಿ ರಚಿತಾ ರಾಂ ಬಿಡದಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
ಈ ಸಿನಿಮಾದ ನಾಯಕಿ ರಚಿತಾ ರಾಂ. ಹೀಗಾಗಿ ಪೊಲೀಸರು ಅವರನ್ನೂ ವಿಚಾರಣೆಗೊಳಪಡಿಸಿದ್ದಾರೆ. ತಾವು ನೀಡಬೇಕಾದ ಮಾಹಿತಿ ನೀಡಿ ಹೊರಬಂದ ಬಳಿಕ ಮಾತನಾಡಿದ ರಚಿತಾ ರಾಂ, ಉದ್ದೇಶಪೂರ್ವಕವಾಗಿ ಯಾವುದೂ ನಡೆದಿಲ್ಲ ಎಂದಿದ್ದಾರೆ.
ಫೈಟ್ ಆಗ್ಲೀ, ಯಾವುದೇ ದೃಶ್ಯವಾಗಲೀ ಸುರಕ್ಷತಾ ಕ್ರಮಗಳೊಂದಿಗೆ ಮಾಡಬೇಕು ಎಂದು ಹೇಳಬಹುದಷ್ಟೇ ಎಂದಿದ್ದಾರೆ. ಇನ್ನು, ಅಜೇಯ್ ರಾವ್ ಸ್ಥಳದಲ್ಲಿದ್ದರೂ ಸ್ಪಂದಿಸಲಿಲ್ಲ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ರಚಿತಾ, ನಾನು ಅಲ್ಲಿ ಇದ್ದಿದ್ದರೆ, ಹೇಳಬಹುದಿತ್ತು. ಇಲ್ಲದ ಕಾರಣ ಅವರ ಬಗ್ಗೆ ಪ್ರತಿಕ್ರಿಯಿಸುವುದು ತಪ್ಪಾಗುತ್ತದೆ. ಆದರೆ ಒಂದು ವೇಳೆ ಅವರಿದ್ದರೆ ಖಂಡಿತಾ ಹೋಗಲೇಬೇಕಾಗಿತ್ತು. ಯಾಕೆಂದರೆ ಒಬ್ಬರಿಗೆ ಏನಾದ್ರೂ ಆದ್ರೆ ಇಡೀ ಸೆಟ್ ಬರ್ಲೇಬೇಕಲ್ವಾ ಎಂದಿದ್ದಾರೆ.