ಬೆಂಗಳೂರು: ರಾಜಕುಮಾರ ಸಿನಿಮಾದ ನಂತರ ಪುನೀತ್ ರಾಜ್ ಕುಮಾರ್ ಯಾವ ಚಿತ್ರ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ತಮಿಳಿನ ಸೂಪರ್ ಹಿಟ್ ಚಿತ್ರ ಪೂಜೈ ಸಿನಿಮಾದ ರಿಮೇಕ್ ನಲ್ಲಿ ಪುನೀತ್ ನಟಿಸಲಿದ್ದಾರೆ ಎಂಬ ಸುದ್ದಿ ಬಂದಿದೆ.
ಮುಕುಂದ ಮುರಾರಿ ಸಿನಿಮಾದ ಯಶಸ್ಸಿನಿಂದ ಹಿಗ್ಗಿರುವ ನಿರ್ಮಾಪಕರಾದ ಜಯಶ್ರೀ ದೇವಿ ಮತ್ತು ಎಂ.ಎನ್. ಕುಮಾರ್ ಈ ಸಿನಿಮಾಕ್ಕೆ ಹಣ ಹಾಕುತ್ತಿದ್ದಾರೆ. ನೃತ್ಯ ನಿರ್ದೇಶಕರಾಗಿ ನಂತರ ಫುಲ್ ಟೈಂ ನಿರ್ದೇಶಕರಾಗಿ ಯಶಸ್ವಿಯಾದ ಹರ್ಷ ನಿರ್ದೇಶನ ಮಾಡಲಿದ್ದಾರೆ.
ಈಗಾಗಲೇ ದೊಡ್ಮನೆಯ ದೊಡ್ಡ ಮಗ ಶಿವರಾಜ್ ಕುಮಾರ್ ಅವರ ಎರಡು ಚಿತ್ರಗಳನ್ನು ನಿರ್ದೇಶಿಸಿ ಯಶಸ್ವಿಯಾದ ಹರ್ಷ ಈಗ ಪುನೀತ್ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಇದು ತಮಿಳಿನ ಪೂಜೈ ಸಿನಿಮಾದ ರಿಮೇಕ್. ಆ ಸಿನಿಮಾವನ್ನು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಾಯಿಸಿಕೊಳ್ಳಲಿದ್ದಾರಂತೆ.
ಅಂದ ಹಾಗೆ ಈ ಚಿತ್ರದಲ್ಲಿ ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುವುದೆಂಬ ಸುದ್ದಿ ಹರಡಿತ್ತು. ಅದು ಎಷ್ಟು ನಿಜವೊ ಸುಳ್ಳೋ ಗೊತ್ತಿಲ್ಲ. ದರ್ಶನ್ ಜಾಗಕ್ಕೆ ಪುನೀತ್ ಬಂದಿರುವುದಂತೂ ಸತ್ಯ. ಉಳಿದ ಪಾತ್ರ ವರ್ಗದವರ ಡೀಟೈಲ್ಸ್ ಸದ್ಯದಲ್ಲೇ ನಿರೀಕ್ಷಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ