ಬೆಂಗಳೂರು: ಮಾರ್ಚ್ 17 ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬರ್ತ್ ಡೇ ಇದೆ. ಆದರೆ ಈ ಬಾರಿ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸದೇ ಇರಲು ಪುನೀತ್ ತೀರ್ಮಾನಿಸಿದ್ದಾರೆ.
ಕೊರೋನಾ ವೈರಸ್ ಭೀತಿಯಿಂದಾಗಿ ರಾಜ್ಯ ಸರ್ಕಾರ ಒಂದು ವಾರ ಕಾಲ ಕರ್ನಾಟಕದಲ್ಲಿ ಸಾಮೂಹಿಕವಾಗಿ ಜನರು ಸೇರುವುದನ್ನು ಅಂತಹ ಕಾರ್ಯಕ್ರಮಗಳನ್ನು ನಿರ್ಬಂಧಿಸಿದೆ. ಹೀಗಾಗಿ ತಮ್ಮ ಹುಟ್ಟುಹಬ್ಬವನ್ನು ಜನರೊಂದಿಗೆ ಆಚರಿಸಲು ಪುನೀತ್ ಮುನ್ನೆಚ್ಚರಿಕೆಯ ಕ್ರಮವಾಗಿ ಹಿಂದೇಟು ಹಾಕಿದ್ದಾರೆ.
‘ಎಲ್ಲಾ ಅಭಿಮಾನಿ ದೇವರಿಗೆ ನನ್ನ ನಮಸ್ಕಾರ. ಈ ವರ್ಷ ಮಾರ್ಚ್ 17 ಕ್ಕೆ ನಾನು ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ. ಹಾಗಾಗಿ ಯಾರೂ ಈ ವರ್ಷ ನನ್ನ ಮನೆ ಹತ್ರ ಬೇರೆ ಬೇರೆ ಊರುಗಳಿಂದ ಬರಬೇಡಿ. ನಾನು ಮನೆಯಲ್ಲೂ ಇರಲ್ಲ. ಇಡೀ ವಿಶ್ವದಲ್ಲೇ ಈಗ ಏನು ತೊಂದರೆ ನಡೆಯುತ್ತಿದೆ, ಅದಕ್ಕೆ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ನಾನೂ ಕೈಜೋಡಿಸುತ್ತೇನೆ. ನಿಮ್ಮ ಪ್ರೀತಿ ವಿಶ್ವಾಸ ಹೀಗೇ ಇರುತ್ತದೆ ಎಂದು ನಾನು ಭಾವಿಸಿದ್ದೇನೆ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಪುನೀತ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ನೀಡಿದ್ದಾರೆ.