ಬೆಂಗಳೂರು: ಕ್ರಿಸ್ ಮಸ್ ಮುನ್ನಾದಿನ ಬಾರ್ ಒಂದರಲ್ಲಿ ನಿರ್ಮಾಪಕಿ ವಂದನಾ ಮತ್ತು ಗಂಡ ಹೆಂಡತಿ ಖ್ಯಾತಿಯ ನಟಿ ಸಂಜನಾ ಗಲ್ರಾನಿ ನಡುವೆ ಗಲಾಟೆ ನಡೆದು ಪ್ರಕರಣ ದಾಖಲಾಗಿತ್ತು.
ಈ ವಿಚಾರವಾಗಿ ಸಂಜನಾ ಮಾಧ್ಯಮಗಳಿಗೆ ಸ್ಪಷ್ಟನೆ ನೀಡುವಾಗ ನನ್ನ ಹೆಸರು ಬಳಸಿಕೊಂಡು ವಂದನಾ ಪುಕ್ಸಟೆ ಪ್ರಚಾರ ಪಡೆದರು ಎಂದಿದ್ದರಲ್ಲದೆ, ನನ್ನ ಮೇಲೆ ವಿನಾಕಾರಣ ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದು ಸುದೀರ್ಘ ಸ್ಪಷ್ಟನೆ ಕೊಟ್ಟಿದ್ದರು.
ಸಂಜನಾ ಹೇಳಿಕೆಯ ಬಳಿಕ ಇದೀಗ ವಂದನಾ ನಟಿ ವಿರುದ್ಧ ಈ ವಿಚಾರವಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿರುವುದಾಗಿ ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಈ ಇಬ್ಬರ ಜಗಳ ಇನ್ನು, ಎಲ್ಲಿಯವರೆಗೆ ಮುಟ್ಟುತ್ತದೋ ಕಾದುನೋಡಬೇಕಿದೆ.