Webdunia - Bharat's app for daily news and videos

Install App

ಪ್ರೀತಿಯ ರಾಯಭಾರಿಯ ಹಾಡುಗಳ ಅನಾವರಣ

Webdunia
ಮಂಗಳವಾರ, 14 ಫೆಬ್ರವರಿ 2017 (11:29 IST)
‘ಪ್ರೀತಿಯ ರಾಯಭಾರಿ’ ಆಡಿಯೋ ಸಿಡಿ ಅನಾವರಣಗೊಂಡಿದೆ. ಸಂಗೀತ ನಿರ್ದೇಶಕ ಅರ್ಜುನ್‍ಜನ್ಯರಿಗೆ ಆಪ್ತರಾಗಿರುವ ನಿರ್ದೇಶಕ ಎಂ.ಎಂ.ಮುತ್ತು 2೦12ರಂದು ನಂದಿಬೆಟ್ಟದಲ್ಲಿ ನಡೆದ ಒಂದು ಘಟನೆಯು ಪ್ರಸಾರವಾಗುವುದನ್ನು ನೋಡಿ ಅದರ ಸಣ್ಣ ಎಳೆಯನ್ನು ತೆಗೆದುಕೊಂಡು ಕತೆ ಸಿದ್ದಪಡಿಸಿ, ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. 
 
ಕಥನ ಶುರುವಾಗುವುದೇ ಮೂಲ ಸೌಕರ್ಯಗಳು ಇಲ್ಲದ ಸ್ಥಳದಲ್ಲಿ. ಅದಕ್ಕಾಗಿ ಹಿರಿಯೂರಿನ ಸಮೀಪದ ಒಂದು ಹಳ್ಳಿಯನ್ನು ಬಳಸಿಕೊಂಡಿದ್ದಾರೆ. ಪಾತ್ರಗಳು ರಾಯಭಾರಿ ಆಗಿರುವುದಿಲ್ಲ. ನೋಡುಗರು ರಾಯಭಾರಿಗಳು. ಸನ್ನಿವೇಶಗಳು ಹೂಸಗೆಯಿಂದ ಕೂಡಿದೆ. 
 
ಹೆಚ್ಚಿನ ವಿವರ ನೀಡದಲ್ಲಿ ಸಿನಿಮಾದ ಸುಳಿವು ಬಿಟ್ಟುಕೊಟ್ಟಂತೆ ಆಗುತ್ತದೆ. ಅದರಿಂದ ಚಿತ್ರಮಂದಿರಕ್ಕೆ ಬನ್ನಿ ಎಂದು ಆಹ್ವಾನ ನೀಡುತ್ತಾರೆ. ಪಟ್ಟಣದಲ್ಲಿ ಕೃಷಿ ಪದವಿ ಪಡೆದುಕೊಂಡು, ಹಳ್ಳಿಯನ್ನು ಅಭಿವೃದ್ದಿ ಮಾಡಲು ಹೋದಾಗ, ಪ್ರೀತಿಗೆ ಬೀಳುತ್ತಾನೆ. ಆಗ ಸಮಸ್ಯೆಗಳು ಉದ್ಬವವಾಗುತ್ತದೆ. ಇದರ ಮಧ್ಯೆ ಇಬ್ಬರ ಮಧ್ಯೆ ಘರ್ಷಣೆ ಉಂಟಾಗುತ್ತದೆ. 
 
ಅದನ್ನು ಎದುರಿಸುವ ಪಾತ್ರದಲ್ಲಿ ನಕುಲ್ ನಾಯಕನಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇವರು ನೀನಾಸಂ ಹಾಗೂ ಚೆನ್ನೈನಲ್ಲಿ ನಟನೆಗೆ ಬೇಕಾದ ಎಲ್ಲಾ ತರಬೇತಿಯನ್ನು ಪಡೆದುಕೊಂಡು ಕ್ಯಾಮರಾ ಮುಂದೆ ನಿಂತಿರುವುದು ಅಭಿನಯದ ಮೇಲಿನ ಆಸಕ್ತಿ ತೋರಿಸುತ್ತದೆ. 
 
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಗೋಪಾಲಯ್ಯ ಕನ್ನಡ ಚಿತ್ರಗಳನ್ನು ಒಂದು ಬಾರಿಯಾದರೂ ನೋಡಬೇಕು. ಹೂರನಾಡಿನಲ್ಲಿ ಅಲ್ಲಿನ ಜನರು ಸಿನಿಮಾಗಳಿಗೆ ಪ್ರಾಧಾನ್ಯತೆ ನೀಡುವುದರಿಂದ ಬಹುತೇಕ ಚಿತ್ರಗಳು ಹಿಟ್ ಆಗುತ್ತವೆ.  ಅದನ್ನು ನಾವುಗಳು ಅನುಕರಿಸಿದರೆ ಕನ್ನಡ ನಾಡು, ಭಾಷೆ, ಕರ್ನಾಟಕ ಉಳಿಯುತ್ತವೆ ಎಂದು ಅಭಿಪ್ರಾಯಪಟ್ಟರು. 
 
 ಸದ್ಯದಲ್ಲೆ ಹಸಮಣೆ ಏರಲಿರುವ ನಿರ್ದೇಶಕ ಸುನಿ ಗೆಳೆಯನ ಚಿತ್ರಕ್ಕೆ ಶುಭ ಹಾರೈಸಲು ಆಗಮಿಸಿ, ನಿರ್ಮಾಪಕರು, ನಿರ್ದೇಶಕರು ಮುತ್ತಿನಂಥ ಮನಸ್ಸು. ಚಿತ್ರವು ಪ್ರೇಕ್ಷಕರಿಗೆ ರಾಯಭಾರಿಯಾಗಿ, ನಿರ್ಮಾಪಕರಿಗೆ ಅಂಬಾರಿಯಾಗಲಿ ಎಂದರು. ಅದ್ದೂರಿಯಾಗಿ ವೇದಿಕೆಗೆ ಆಗಮಿಸಿದ ಅರ್ಜುನ್‍ಜನ್ಯಾ ಚಾರ್ಮ್‍ನ್ನು ಉಳಿಸಿಕೊಳ್ಳಲು ಹಿಟ್ ಹಾಡುಗಳನ್ನು ಕೊಡಲೇ ಬೇಕಾಗಿದೆ. ಮುತ್ತು ನನಗೆ ಗೊತ್ತು.  ಎ.ಆರ್.ರೆಹಮಾನ್ ಅಭಿಮಾನಿಯಾಗಿ, ಅವರ ಕಾಲಿನ ದೂಳಿಗೆ ಸಮಾನವಾಗಿಲ್ಲವೆಂದು ನಿರೂಪಕಿಯ ಪ್ರಶ್ನೆಗೆ ಉತ್ತರ ನೀಡಿ ಹೆಬ್ಬುಲಿ ಗೀತೆಯನ್ನು ಹಾಡಿ ರಂಜಿಸಿದರು. 
 
ನಂತರ  ಸುದೀಪ್ ಆಗಮನದೊಂದಿಗೆ ವೇದಿಕೆಗೆ ಕರಂಟ್ ಬಂದಂತೆ ಆಯಿತು. ಅವರು ತಮ್ಮ ಮಾತಿನಲ್ಲಿ ಹೆಬ್ಬುಲಿ ಬಗ್ಗೆ ಮಾತನಾಡಿದ್ದು ಖುಷಿ ತಂದಿದೆ. ಅರ್ಜುನ್‍ಜನ್ಯಾ ಸಂಗೀತದಿಂದ ಹಾಡುಗಳು ಹಿಟ್ ಆಗಿವೆ. ಎಲ್ಲವು ಅವರಿಂದಲೇ ಅಂತ ಯಶಸ್ಸನ್ನು ಅವರಿಗೆ ವರ್ಗಾಯಿಸಿ, ವಿಲನ್ ಫೋಟೋ ಶೂಟ್ ಮುಗಿಸಬೇಕಾಗಿರುವುದರಿಂದ ತಡವಾಯಿತು ಎಂದು ಹೆಬ್ಬುಲಿ ಗೀತೆಯ ಸಾಲನ್ನು ಹೇಳಿದರು. 
 
ಅರ್ಜುನ್‍ಜನ್ಯಾ ಸಿದ್ದಪಡಿಸಿದ್ದ ಸುದೀಪ್‍ರ ಸಣ್ಣ ವಿಡಿಯೋವನ್ನು ಪ್ರದರ್ಶಿಸಲಾಯಿತು.  ನಕುಲ್ ಬುಲೆಟ್ ಮೂಲಕ ಎಂಟ್ರಿಕೊಟ್ಟು ಲಲನೆಯರೊಂದಿಗೆ ಡ್ಯಾನ್ಸ್ ಮಾಡಿದರು. ರಾಜಕೀಯ ಧುರೀಣ ಎಸ್.ಆರ್.ವೆಂಕಟೇಶ್ ಪುತ್ರನ ಸಲುವಾಗಿ ನಿರ್ಮಾಣ ಮಾಡಿದ್ದಾರೆ. ಸದ್ಯ ಡಿಟಿಎಸ್ ಹಂತದಲ್ಲಿರುವ ಸಿನಿಮಾವು ಮಾರ್ಚ್‍ನಲ್ಲಿ ತೆರೆಕಾಣುವ ಸಾದ್ಯತೆ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments