Select Your Language

Notifications

webdunia
webdunia
webdunia
webdunia

ಮತ್ತೊಬ್ಬ ತೆಲುಗು ಸ್ಟಾರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ

ಮತ್ತೊಬ್ಬ ತೆಲುಗು ಸ್ಟಾರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ
ಹೈದರಾಬಾದ್ , ಸೋಮವಾರ, 25 ಡಿಸೆಂಬರ್ 2023 (09:01 IST)
ಹೈದರಾಬಾದ್: ಕೆಜಿಎಫ್ ಮೂಲಕ ತನ್ನ ಖ್ಯಾತಿ ಹೆಚ್ಚಿಸಿಕೊಂಡ ಕನ್ನಡಿಗ ನಿರ್ದೇಶಕ ಪ್ರಶಾಂತ್ ನೀಲ್ ಈಗ ಕನ್ನಡದಲ್ಲೇ ಬೀಡುಬಿಡುವ ಲಕ್ಷಣ ಕಾಣುತ್ತಿದೆ.

ಸಲಾರ್ ಸಿನಿಮಾ ಭರ್ಜರಿ ಸಕ್ಸಸ್ ಆದ ಬೆನ್ನಲ್ಲೇ ಪ್ರಶಾಂತ್ ನೀಲ್ ಮುಂದೆ ಜ್ಯೂ.ಎನ್ ಟಿಆರ್ ಜೊತೆ ಸಿನಿಮಾ ಮಾಡಲಿದ್ದಾರೆ. ಅದಾದ ಬಳಿಕ ಸಲಾರ್ 2 ಕೂಡಾ ಕೈಯಲ್ಲಿದೆ.

ಇದರ ಜೊತೆಗೆ ಪ್ರಶಾಂತ್ ನೀಲ್ ಈಗ ಮತ್ತೊಬ್ಬ ತೆಲುಗು ಸ್ಟಾರ್ ನಟನಿಗೆ ಚಿತ್ರ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ಗಾಗಿ ನೀಲ್ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಬಿರುತ್ತಿದೆ.

ಈಗಾಗಲೇ ಎರಡು ತೆಲುಗು ಚಿತ್ರ ಒಪ್ಪಿಕೊಂಡಿರುವ ಪ್ರಶಾಂತ್ ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡರೆ ಸದ್ಯಕ್ಕಂತೂ ಕನ್ನಡದತ್ತ ಬರುವ ಯೋಜನೆಯಿಲ್ಲ ಎಂದೇ ಹೇಳಬಹುದು. ಈಗಾಗಲೇ ಸಾಲು ಸಾಲು ತೆಲುಗು ಸಿನಿಮಾ ಒಪ್ಪಿಕೊಂಡಿದ್ದಕ್ಕೆ ಕನ್ನಡ ಅಭಿಮಾನಿಗಳಿಂದ ಟೀಕೆಗೊಳಗಾಗುತ್ತಿದ್ದಾರೆ. ಇದರ ನಡುವೆ ಕನ್ನಡ ಸಿನಿಮಾಗೆ ಬಾರದೇ ಇದ್ದಲ್ಲಿ ಪ್ರಶಾಂತ್ ಮತ್ತಷ್ಟು ಟ್ರೋಲ್ ಗೊಳಗಾಗುವುದು ಖಂಡಿತಾ.

Share this Story:

Follow Webdunia kannada

ಮುಂದಿನ ಸುದ್ದಿ

ಅನಿಮಲ್ ಸಿನಿಮಾದಲ್ಲಿ ಇನ್ನು ಬೋಲ್ಡ್ ದೃಶ್ಯಗಳಿರಲ್ಲ!