ತೆಲುಗು ನಟ ಪ್ರಭಾಸ್ ಅವರನ್ನ ನ್ಯಾಶನಲ್ ಐಕಾನ್ ಮಾಡಿದ ಚಿತ್ರ ಬಾಹುಬಲಿ. ರಾಜಮೌಳಿ ನಿರ್ದೇಶನದ ಈ ಚಿತ್ರದ ಪಾರ್ಟ್-2 ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಚಿತ್ರದ ಪ್ರಚಾರದಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ.
ಇದೇ ಜನಪ್ರಿಯತೆ ಬಳಸಿಕೊಮಡು ರಾಜಕೀಯಕ್ಕೆ ಪ್ರವೇಶ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಪ್ರಭಾಸ್, ಖಂಡಿತಾ ಇಲ್ಲ. ರಾಜಕೀಯಕ್ಕೆ ನಾನು ಸರಿಹೋಗುವುದಿಲ್ಲ. ರಾಜಕೀಯದ ಅಭಿಲಾಷೆ ಇಂದಿಗೂ ಇಲ್ಲ ಎಂದೆಂದಿಗೂ ಇಲ್ಲ ಎಂದಿದ್ದಾರೆ.
ಬಾಹುಬಲಿಯಂತಹ ಅಂತಾರಾಷ್ಟ್ರೀಯ ಗುಣಮಟ್ಟದ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು, ನಿಜಕ್ಕೂ ಸಂತಸದ ವಿಷಯ. ಇದರ ಸಂಪೂರ್ಣ ಶ್ರೇಯ ರಾಜಮೌಳಿಗೆ ಸಲ್ಲಬೇಕು. ಇದು ರಾಜಮೌಳಿಯ ಕನಸು. ಅದನ್ನ ಸಾಕಾರಗೊಳಿಸಲು ಸಹಕಾರ ಕೊಟ್ಟಿದ್ದೇನೆ. ನೀವು ಬಾಹುಬಲಿ ರೀತಿಯ ಮತ್ತೊಂದು ಚಿತ್ರ ಮಾಡ್ತೀರಾ ಎಂದು ಕೇಳಿದ್ದಕ್ಕೆ ನಗುತ್ತಾ ಉತ್ತರಿಸಿದ ಪ್ರಭಾಸ್, ಬಾಹುಬಲಿ ರೀತಿಯ ಮತ್ತೊಂದು ಚಿತ್ರವನ್ನ ಟ್ರೈ ಮಾಡಲು ಹೋದರೆ ನಾನು ಸತ್ತೇ ಹೋಗ್ತೀನಿ. ಅಷ್ಟು ಸುಲಭವಾಗಿ ಪ್ರತಿಕೃತಿ ನಿರ್ಮಿಸಬಹುದಾದ ಚಿತ್ರ ಅದಲ್ಲ. ಅಷ್ಟೊಂದು ದೊಡ್ಡ ಪ್ರಮಾಣದ ಚಿತ್ರವನ್ನ ಹ್ಯಾಂಡಲ್ ಮಾಡುವ ಅನುಭವ ಮತ್ತು ದೃಷ್ಟಿಕೋನ ರಾಜಮೌಳಿಗೆ ಮಾತ್ರವಿದೆ ಎಂದಿದ್ದಾರೆ.
ಬಾಹುಬಲಿ-2 ರಿಲೀಸ್ ಬಳಿಕ ಸಾಹೂ ಎಂಬ ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರಂತೆ. 150 ಕೋಟಿ ರೂ. ಬಜೆಟ್`ನ ಈ ಚಿತ್ರವನ್ನ ಸುಜೀತ್ ನಿರ್ದೇಶನ ಮಾಡುತ್ತಿದ್ದಾರಂತೆ.