ಬೆಂಗಳೂರು: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಂಡಲ್ ವುಡ್ ನಿರ್ದೇಶಕ ಪವನ್ ಒಡೆಯರ್ ದಂಪತಿ ಈ ಖುಷಿಯನ್ನು ಭರ್ಜರಿಯಾಗಿಯೇ ಆಚರಿಸಿದ್ದಾರೆ.
ಪವನ್ ಒಡೆಯರ್ ಪತ್ನಿ ಅಪೇಕ್ಷಾ ಗರ್ಭಿಣಿಯಾಗಿದ್ದು, ದಂಪತಿ ಫೋಟೋ ಶೂಟ್ ಮಾಡಿಸಿಕೊಂಡು ಸುಂದರ ಕ್ಷಣಗಳನ್ನು ಹರಿಯಬಿಟ್ಟಿದ್ದಾರೆ. ಅದರ ಜತೆಗೆ ಪತ್ನಿಗಾಗಿ ಪವನ್ ಹೊಸ ಹಾಡೊಂದರ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಹಾಡನ್ನು ಅವರೇ ಬರೆದು ಸಂಗೀತ ಸಂಯೋಜಿಸಿರುವುದು ವಿಶೇಷ. ಅಕ್ಟೋಬರ್ 11 ರಂದು ಈ ಹಾಡನ್ನು ಲಾಂಚ್ ಮಾಡಲಿದ್ದಾರೆ.