ಹೊಸಬರ ತಂಡವೊಂದು ಸಿನಿಮಾ ಮಾಡುತ್ತಿದೆಯೆಂದರೆ ಹೊಸಾ ಪ್ರಯೋಗಗಳೂ ನಡೆಯುತ್ತವೆ ಎಂಬ ನಂಬಿಕೆ ಎಲ್ಲ ಪ್ರೇಕ್ಷಕರಲ್ಲಿಯೂ ಇದೆ. ಇದುವರೆಗೆ ಬಂದ ಬಹುತೇಕ ಹೊಸಬರೂ ಕೂಡಾ ಅದನ್ನು ನಿಜವಶಾಗಿಸುವಂಥಾ ಚಿತ್ರಗಳನ್ನೇ ಕೊಟ್ಟಿದ್ದಾರೆ. ಅಂಥಾ ಚಿತ್ರಗಳ ಚಾಲಿನಲ್ಲಿ ದಾಖಲಾಗೋ ಎಲ್ಲ ಲಕ್ಷಣಗಳು ಮತ್ತು ಅರ್ಹತೆಗಳನ್ನೂ ಹೊಂದಿರುವ ಚಿತ್ರ ಒನ್ ಲವ್ 2 ಸ್ಟೋರಿ. ಇದೇ ತಿಂಗಳ ಹದಿನಾರನೇ ತಾರೀಕಿನಂದು ಬಿಡುಗಡೆಯಾಗಲಿರೋ ಈ ಚಿತ್ರ ಇದೀಗ ಹೊಸತನದ ಸುಳಿವಿನೊಂದಿಗೇ ಎಲ್ಲರ ಚಿತ್ತವನ್ನೂ ಸೆಳೆದುಕೊಂಡಿದೆ.
ಶೀರ್ಷಿಕೆ ನೋಡಿದರೇನೇ ಇದೊಂದು ಪ್ರೇಮಕಥೆಯ ಚಿತ್ರ ಎಂಬ ಸ್ಪಷ್ಟ ಸಂದೇಶ ಸಿಕ್ಕುಬಿಡುತ್ತದೆ. ಇದುವರೆಗೂ ಹೊರಬಂದಿರೋ ವಿಚಾರಗಳೂ ಕೂಡಾ ಅದಕ್ಕೆ ಪೂರಕವಾಗಿಯೇ ಇವೆ. ಆದರೆ ಈ ಸಿನಿಮಾದಲ್ಲಿರೋದು ಬರೀ ಪ್ರೀತಿ ಅಷ್ಟೇನಾ ಎಂಬ ಪ್ರಶ್ನೆಗೆ ಟ್ರೇಲರ್ನಲ್ಲಿಯೇ ಒಂದು ಮಟ್ಟದ ಉತ್ತರ ಸಿಗುತ್ತದೆ. ಇಲ್ಲಿ ಪ್ರೀತಿ ಪ್ರೇಮ ಎಂಬುದು ಪ್ರಧಾನ ಎಳೆಯಾದರೂ ಅದರಾಚೆಗೆ ಸಾಕಷ್ಟು ಬೆರಗಾಗಿಸುವ ಅಂಶಗಳನ್ನು ಒನ್ ಲವ್ 2 ಸ್ಟೀರಿ ಚಿತ್ರ ಒಳಗೊಂಡಿದೆ. ಹೀಗಂತ ಚಿತ್ರತಂಡವೂ ಹೇಳಿಕೊಂಡಿದೆ.
ಇಲ್ಲಿ ಎಂಥವರೂ ಅಚ್ಚರಿಗೊಳ್ಳುವಂಥಾ ಆಕ್ಷನ್ ಸೀನುಗಳಿದ್ದಾವೆ. ಕಥೆಯೆಂಬುದು ಪ್ರೀತಿ, ಯುವ ಆವೇಗದ ಅಂಶಗಳನ್ನು ಹೊಂದಿದ್ದರೂ ಆಪ್ತವಾಗುವಂಥಾ ಇನ್ನೊಂದಷ್ಟು ವಿಚಾರಗಳತ್ತಲೂ ಇಲ್ಲಿ ಫೋಕಸ್ ಮಾಡಲಾಗಿದೆಯಂತೆ.
ಬದುಕಿಗೆ ಹತ್ತಿರವಾದ ಅಂಥಾ ವಿಚಾರಗಳೆಲ್ಲವೂ ಪ್ರೇಕ್ಷಕರನ್ನು ಆವರಿಸಿಕೊಳ್ಳುವಂತಿವೆ ಮತ್ತು ಅವು ಥೇಟರಿನಿಂದ ಹೊರ ಬಂದ ಮೇಲೂ ಕಾಡುತ್ತವೆ. ಕನ್ನಡಕ್ಕೆ ತೀರಾ ಹೊಸತೆನ್ನಿಸುವಂಥಾ ಸ್ಕ್ರೀನ್ಪ್ಲೇ ಇದರ ಅಸಲೀ ಹೆಚ್ಚುಗಾರಿಕೆ.
ಅದುವೇ ಇಡೀ ಚಿತ್ರವನ್ನು ವಿಶೇಷವಾಗಿಸಿದೆ ಅಂತ ನಿರ್ದೇಶಕರೇ ಹೇಳಿಕೊಂಡಿದ್ದಾರೆ. ನಿಜಕ್ಕೂ ಒನ್ ಲವ್ 2 ಸ್ಟೋರಿಯಲ್ಲಿ ಲವ್ ಅನ್ನು ಹೊರತಾಗಿಸಿ ಬೇರೇನಿದೆ ಅನ್ನೋದು ಜಾಹೀರಾಗಲು ವಾರವಷ್ಟೇ ಬಾಕಿ ಉಳಿದುಕೊಂಡಿದೆ.