ತಮಿಳುನಾಡು: ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ ಸಿನಿಮಾ ಪ್ರಚಾರದ ವೇಳೆ ತಮ್ಮ ಡ್ರೆಸ್ಸಿಂಗ್ ಸ್ಟೈಲ್ ಕುರಿತ ಟೀಕೆಗಳಿಗೆ ನಟಿ ಅಮಲಾ ಪೌಲ್ ಪ್ರತಿಕ್ರಿಯಿಸಿದ್ದಾರೆ.
ಸೇಂಟ್ ಆಲ್ಬರ್ಟ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಕಪ್ಪು ಮಿನಿ ಡ್ರೆಸ್ ಧರಿಸಲು ಆಯ್ಕೆ ಮಾಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ ನಿಂದನೆಯನ್ನು ಎದುರಿಸಿದ ನಟಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು.
ಅಮಲಾ ಪೌಲ್ ಈ ಬಗ್ಗೆ ಮಾತನಾಡಿ, ನನಗೆ ಆರಾಮದಾಯಕವಾದದ್ದನ್ನು ಮಾತ್ರ ಧರಿಸುತ್ತೇನೆ. ನನ್ನ ಬಟ್ಟೆಯನ್ನು ನನಗೇನು ಸಮಸ್ಯೆ ಕಂಡುಬಂದಿಲ್ಲ. ಕ್ಯಾಮೆರಾಗಳು ನನ್ನ ಡ್ರೆಸ್ಸಿಂಗ್ ಶೈಲಿಯನ್ನು ಹೇಗೆ ತೋರಿಸಿದ್ದವು ಎಂಬುದರಲ್ಲಿ ಸಮಸ್ಯೆ ಇದೆ. ನನಗೆ ಆರಾಮದಾಯಕವಾದುದನ್ನು ನಾನು ಧರಿಸಿದ್ದೇನೆ. ಸಮಾರಂಭಕ್ಕೆ ನನ್ನ ಉಡುಗೆ ಅನುಚಿತವಾಗಿರಲಿಲ್ಲ. ಕ್ಯಾಮೆರಾಗಳು ನನ್ನ ಉಡುಪನ್ನು ತೋರಿಸಿದ ರೀತಿ ಬಹುಶಃ ಸೂಕ್ತವಲ್ಲ. ಅದರ ಮೇಲೆ ನನಗೆ ಯಾವುದೇ ನಿಯಂತ್ರಣವಿಲ್ಲ ಎಂದರು.
"ನಾನು ಧರಿಸಿದ್ದ ಬಟ್ಟೆಯಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ಆರಾಮದಾಯಕವಾಗಿದ್ದರು. ನಾನು ಸಾಂಪ್ರದಾಯಿಕ ಅಥವಾ ಪಾಶ್ಚಿಮಾತ್ಯ ಎಲ್ಲಾ ರೀತಿಯ ಉಡುಪುಗಳನ್ನು ಧರಿಸುತ್ತೇನೆ. ಆ ಉಡುಪನ್ನು ಧರಿಸುವ ಮೂಲಕ, ವಿದ್ಯಾರ್ಥಿಗಳಲ್ಲಿ ಅವರ ಡ್ರೆಸ್ಸಿಂಗ್ ಆಯ್ಕೆಗಳ ಬಗ್ಗೆ ಆತ್ಮವಿಶ್ವಾಸವನ್ನು ತುಂಬಲು ನಾನು ಬಯಸುತ್ತೇನೆ ಎಂದು ಅವರು ಹೇಳಿದರು.
ಕಳೆದ ತಿಂಗಳು ಗಂಡು ಮಗುವಿಗೆ ಜನ್ಮ ನೀಡಿದ ಅಮಲಾ ಪೌಲ್, ಆಸಿಫ್ ಅಲಿ ಮತ್ತು ಶರಾಫುದ್ದೀನ್ ಮುಖ್ಯಭೂಮಿಕೆಯಲ್ಲಿರುವ 'ಲೆವೆಲ್ ಕ್ರಾಸ್' ಚಿತ್ರದ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಜೀತು ಜೋಸೆಫ್ ಪ್ರಸ್ತುತಪಡಿಸಿದ ಮತ್ತು ಅರ್ಫಾಜ್ ಅಯೂಬ್ ನಿರ್ದೇಶನದ ಈ ಚಿತ್ರ ಜುಲೈ 26 ರಂದು ಚಿತ್ರಮಂದಿರಗಳಲ್ಲಿ ಬರಲಿದೆ.