ಬೆಂಗಳೂರು: ಲಾಕ್ ಡೌನ್ ಎಂಬುದು ಸಿನಿ ಕಾರ್ಮಿಕರ ಬದುಕನ್ನು ಮಾತ್ರವಲ್ಲ, ಎಷ್ಟೋ ಉತ್ಸಾಹಿ, ಹೊಸ ನಿರ್ಮಾಪಕರನ್ನೂ ಸಂಕಷ್ಟಕ್ಕೀಡು ಮಾಡಿದೆ.
ಸರ್ಕಾರವೇನೋ ಎರಡು ತಿಂಗಳ ಬಳಿಕ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ಕೆಲವು ಹೊಸ ನಿರ್ಮಾಪಕರು ಈಗ ಆರ್ಥಿಕ ಸಂಕಷ್ಟದಿಂದಾಗಿ ತಾವು ಆರಂಭಿಸಿದ್ದ ಸಿನಿಮಾವನ್ನು ಪೂರ್ತಿ ಮಾಡಲಾಗದೇ ಒದ್ದಾಡುವಂತಾಗಿದೆ.
ಇದರಿಂದಾಗಿ ಎಷ್ಟೋ ಸೆಟ್ಟೇರಿದ ಸಿನಿಮಾಗಳು ಅರ್ಧಕ್ಕೇ ನಿಲ್ಲಲಿವೆ. ಎಷ್ಟೋ ಕಲಾವಿದರ ವೃತ್ತಿಬದುಕು ಅತಂತ್ರವಾಗಲಿದೆ. ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿನೆಸ್ ನಲ್ಲಿ ತೊಡಗಿಸಿಕೊಂಡಿರುವವರು ಸಿನಿಮಾವನ್ನು ಫ್ಯಾಶನ್ ಆಗಿ ತೆಗೆದುಕೊಂಡು ಸಿನಿಮಾ ನಿರ್ಮಾಣಕ್ಕಿಳಿಯುವವರಿದ್ದಾರೆ. ಇಂತಹವರಿಗೆ ಅತ್ತ ಬ್ಯುಸಿನೆಸ್ ನಲ್ಲಿ ನಷ್ಟವಾಗಿ ಈಗ ಸಿನಿಮಾಗೆ ಹಣ ಹೊಂದಿಸಲಾಗುತ್ತಿಲ್ಲ. ಇದರಿಂದ ಎಷ್ಟೋ ಹೊಸಬರ ಸಿನಿಮಾಗಳು ಸದ್ದಿಲ್ಲದೇ ತೆರೆಮರೆಗೆ ಸರಿಯಲಿದೆ. ಜತೆಗೆ ಹೊಸಬರ ಕನಸುಗಳೂ ಅರ್ಧಕ್ಕೇ ಕೊನೆಯಾಗಲಿವೆ.