ಈಗ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಿಗೆ ಭಾರಿ ಬೇಡಿಕೆ ಇದೆ. ಟಿಕೆಟ್ ಬೆಲೆ ಜಾಸ್ತಿ ಎನ್ನಿಸಿದರೂ ಅಲ್ಲಿನ ಸೌಲಭ್ಯಗಳು, ಶುಚಿತ್ವ,ಮಾಲ್ ಆಕರ್ಷಣೆ ಮುಖ್ಯವಾಗಿ ಕೌಟುಂಬಿಕ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇನ್ನು ಯುವಕ-ಯುವತಿಯರಿಗೂ ಮಲ್ಟಿಫ್ಲೆಕ್ಸ್‌ಗಳೇ ಪ್ರಮುಖ ಆಕರ್ಷಣೆ.
ಇದೀಗ ಬೆಂಗಳೂರಿನಲ್ಲಿ ಐದು ಪರದೆಗಳುಳ್ಳ ಇನ್ನೊಂದು ಮಲ್ಟಿಫ್ಲೆಕ್ಸ್ ಆರಂಭವಾಗಿದೆ. ಮಾಗಡಿ ರಸ್ತೆಯ ಜಿ.ಟಿ ಮಾಲ್ ಮಲ್ಟಿಫ್ಲೆಕ್ಸ್ ಆರಂಭವಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌ, ಸಂಸದ ಅನಂತ್ ಕುಮಾರ್, ನಟ ಅಂಬರೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಲ್ಟಿಫ್ಲೆಕ್ಸ್ ಉದ್ಘಾಟಿಸಲಿದ್ದಾರೆ.
ಬೆಂಗಳೂರಿನಲ್ಲಿ ಈಗಾಗಗಲೆ 32 ಮಲ್ಟಿಫ್ಲೆಕ್ಸ್ ಗಳಿದ್ದು ಇದು 33ನೆಯದಾಗಿದೆ. ಒಟ್ಟು 128 ಮಲ್ಟಿಫ್ಲೆಕ್ಸ್ ಪರದೆಗಳಿವೆ. ಈಗ ಆರಂಭವಾಗಿರುವ ಜಿ.ಟಿ ಮಾಲ್ ಬಳಿ ಪ್ರಮೋದ್ ಚಿತ್ರಮಂದಿರವಿತ್ತು. ಅದರ ಜಾಗದಲ್ಲಿ ಜಿ.ಟಿ ಮಾಲ್ ತಲೆಯೆತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.