ಬೆಂಗಳೂರು: ನೆನಪಿರಲಿ ಪ್ರೇಮ್ ವೃತ್ತಿಜೀವನದ 25 ನೇ ಸಿನಿಮಾ ಪ್ರೇಮ ಪೂಜ್ಯಂ ಫೆಬ್ರವರಿಯಲ್ಲಿ ರಿಲೀಸ್ ಆಗಲಿದೆ. ಇದೊಂದು ರೊಮ್ಯಾಂಟಿಕ್ ಎಂಟರ್ ಟೈನರ್ ಸಿನಿಮಾವಾಗಿದೆ.
ಬಹಳ ದಿನಗಳ ನಂತರ ನೆನಪಿರಲಿ ಪ್ರೇಮ್ ಸಿನಿಮಾವೊಂದು ಬಿಡುಗಡೆಯಾಗುತ್ತಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ರಾಘವೇಂದ್ರ ಬಿ.ಎಸ್. ಈ ಸಿನಿಮಾದ ನಿರ್ದೇಶಕರು. ಇದು ಅವರಿಗೆ ಚೊಚ್ಚಲ ಸಿನಿಮಾ. ಹೀಗಾಗಿ ಸಹಜವಾಗಿಯೇ ನಿರೀಕ್ಷೆಗಳೂ ಬೆಟ್ಟದಷ್ಟಿವೆ. ಇನ್ನು, ಲವ್ಲಿ ಸ್ಟಾರ್ ಪ್ರೇಮ್ ರನ್ನು ಈ ಸಿನಿಮಾದಲ್ಲಿ ಡಿಫರೆಂಟ್ ಗೆಟಪ್ ನಲ್ಲಿ ನೋಡಬಹುದಾಗಿದೆ.