ಬೆಂಗಳೂರು: ಲಕ್ಷ್ಮೀ ಬಾರಮ್ಮ ಧಾರವಾಹಿಯ ಗೊಂಬೆ ನೇಹಾಗೌಡ ನಿಶ್ಚಿತಾರ್ಥ ಅವರ ಬಾಲ್ಯದ ಗೆಳೆಯ ಚಂದನ್ ಜತೆ ಇಂದು ನಡೆಯಿತು.
ಕಲರ್ಸ್ ಕನ್ನಡದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಗೊಂಬೆ ಎಂದೇ ಖ್ಯಾತಿ ಗಳಿಸಿದ್ದಾರೆ ನೇಹಾ. ಇತ್ತೀಚೆಗೆ ಕಲರ್ಸ್ ಸೂಪರ್ ಚಾನೆಲ್ಲಿನ ಸೂಪರ್ ಟಾಕ್ ಟೈಮ್ ಗೆ ಬಂದಿದ್ದ ನೇಹಾ, ತಮ್ಮ ಬಾಯ್ ಫ್ರೆಂಡ್ ಬಗ್ಗೆ ಹೇಳಿಕೊಂಡಿದ್ದರು. ವಿಚಿತ್ರ ಅಂದರೆ ಗೊಂಬೆ ರೀಲ್ ಲೈಫ್ ನಲ್ಲು ಚಂದನ್ ಜತೆ ಮದುವೆಯಾಗಿದ್ದು, ರಿಯಲ್ ಲೈಫ್ ನಲ್ಲೂ ಅದೇ ಹೆಸರಿನ ಹುಡುಗನನ್ನ ವರಿಸುತ್ತಿದ್ದಾರೆ.
ತಾವು 6ನೇ ತರಗತಿಯಲ್ಲಿರುವಾಗಲೇ ಚಂದನ್ ಪ್ರಪೋಸ್ ಮಾಡಿದ್ದ. ಅಂದಿನಿಂದಲೂ ಇಬ್ಬರು ಪ್ರೀತಿಸುತ್ತಿದ್ವಿ. 16 ವರ್ಷದ ಪ್ರೇಮಕ್ಕೆ ಇಂದು ನಿಶ್ಚಿತಾರ್ಥದ ಮುದ್ರೆ ಬಿದ್ದಿದೆ. ಮುಂದಿನ ವರ್ಷ ಈ ಜೋಡಿ ಸಪ್ತಪದಿ ತುಳಿಯಲಿದ್ದಾರೆ ಎಂದು ತಿಳಿದು ಬಂದಿದೆ. ನೇಹಾ ಗೌಡ ಹೆಸರಾಂತ ನಟಿ ಸೋನು ಗೌಡ ಸಹೋದರಿಯೂ ಹೌದು.