Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಟೇಶನ್ ಗಣೇಶನ್ ನಿಧನ: ಸಿಂಹಿಣಿಯಂತೆ ಬೆಳೆಸಿದ ತಂದೆಯ ನೆನೆದು ಮಾಳವಿಕಾ ಅವಿನಾಶ್ ಭಾವುಕ

Malavika Avinash

Sampriya

ಬೆಂಗಳೂರು , ಭಾನುವಾರ, 19 ಮೇ 2024 (13:28 IST)
Photo Courtesy X
ಬೆಂಗಳೂರು: ಬಿಜೆಪಿ ನಾಯಕಿ, ನಟಿ ಮಾಳವಿಕಾ ಅವಿನಾಶ್ ಅವರ ತಂದೆ ನಟೇಶನ್ ಗಣೇಶನ್ ಅವರು ಇಂದು ಮೃತಪಟ್ಟಿದ್ದಾರೆ.

ಇನ್ನೂ ಇನ್‌ಸ್ಟಾಗ್ರಾಂನಲ್ಲಿ ತಂದೆಯ ಫೋಟೋ ಹಂಚಿಕೊಂಡು ಬರೆದುಕೊಂಡಿರುವ ಮಾಳವಿಕಾ, ಈ ಚಿತ್ರಗಳನ್ನು ನಾನು ನಾಲ್ಕು ದಿನಗಳ ಹಿಂದೆ ತೆಗೆದಿದ್ದೇನೆ! ಅವರು ಇಂದು ಮುಂಜಾನೆ ಹೊರಡಲು ನಿರ್ಧರಿಸಿದ್ದಾರೆ. ಅವರು ಬ್ಯಾಂಕರ್, ವಕೀಲ, ಬರಹಗಾರ, ನಾಟಕಕಾರ, ಸಾಹಿತ್ಯ ಮತ್ತು ವೇದಗಳಲ್ಲಿ ಆಳವಾದ ಜ್ಞಾನವನ್ನು ಹೊಂದಿರುವ ವಿದ್ವಾಂಸರಾಗಿದ್ದರು.  ಅವರು ನನ್ನ ತಂದೆ ಮತ್ತು ಗುರುವಾಗಿದ್ದರು. ನನ್ನನ್ನು ಮತ್ತು ನನ್ನ ಸಹೋದರಿಯನ್ನು ಸಿಂಹಿಣಿಗಳಂತೆ ಬೆಳೆಸಿದರು, ಅವರು ಎಂದಿಗೂ ನಮ್ಮನ್ನು ಪುರುಷರಿಗಿಂತ ಕೀಳು ಎಂದು ಭಾವಿಸಲಿಲ್ಲ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಅವರ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಅವರ ಕುಟುಂಬಸ್ಥರು ಬಂಧುಮಿತ್ರರು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.

ತತ್ಸಂಬಂಧ ಅಂತ್ಯಸಂಸ್ಕಾರ ಕಾರ್ಯವು ಇಂದು ಸಂಜೆ 5 ಗಂಟೆಗೆ ಕೆಂಗೇರಿ, ಬಂಡೇಮಠದ ಹತ್ತಿರ ಇರುವ ಬಿ.ಬಿ.ಎಂ.ಪಿ ಚಿತಾಗಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಪವಿತ್ರಾ ಜಯರಾಂ ಜೊತೆ ಚಂದ್ರುಗೆ ಸಂಬಂಧವಿತ್ತು: ಪತ್ನಿ ಶಿಲ್ಪಾ ಆರೋಪ