ಟಾಲಿವುಡ್ನಲ್ಲಿ ಎಲ್ಲರ ಗಮನಸೆಳೆದಿರುವ ಅದ್ದೂರಿ ಮದುವೆ ಸಮಂತಾ ಮತ್ತು ನಟ ನಾಗಚೈತನ್ಯ ಅವರದು. ಅಕ್ಕಿನೇನಿ ನಾಗಚೈತನ್ಯ ಮತ್ತು ಸಮಂತಾ ನಿಶ್ಚಿತಾರ್ಥ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ನಡೆಯಲಿದೆ. ಜನವರಿ 29ಕ್ಕೆ ಇವರಿಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ.
ಈಗಾಗಲೆ ಈ ಕಾರ್ಯಕ್ರಮಕ್ಕೆ ಹಲವಾರು ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗಿದೆಯಂತೆ. ಅಕ್ಕಿನೇನಿ, ಕೋಣಿದೆಲ, ಭೂಪಾಲ್, ಪ್ರಭು ಕುಟುಂಬಗಳ ಜತೆಗೆ ಇನ್ನಷ್ಟು ಸೆಲೆಬ್ರಿಟಿಗಳು ಈ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಾರೆ.
ಅಕ್ಕಿನೇನಿ ನಾಗಾರ್ಜುನ ಮಗ ಅಕ್ಕಿನೇನಿ ಅಖಿಲ್ ನಿಶ್ಚಿತಾರ್ಥ ಶ್ರೀಯಾ ಭೂಪಾಲ್ ಜತೆ ಡಿಸೆಂಬರ್ನಲ್ಲಿ ಅದ್ದೂರಿಯಾಗಿ ನಡೆದಿದ್ದು ಗೊತ್ತೇ ಇದೆ. ಇಟಲಿಯಲ್ಲಿ ಇವರಿಬ್ಬರ ಮದುವೆ ನಡೆಯಲಿದೆ. ಇನ್ನು ನಾಗಚೈತನ್ಯ ಮತ್ತು ಸಮಂತಾ ಮದುವೆಯೂ ಅಷ್ಟೇ ಅದ್ದೂರಿಯಾಗಿ ಮಾಡಲು ನಾಗಾರ್ಜುನ ನಿರ್ಧರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.