ಬೆಂಗಳೂರು: ನಟ ಡಾಲಿ ಧನಂಜಯ್ ನಾಯಕರಾಗಿರುವ ಮಾನ್ಸೂನ್ ರಾಗ ಸಿನಿಮಾದ ಹಾಡೊಂದು ಈಗ ಯೂ ಟ್ಯೂಬ್ ನಲ್ಲಿ ಟ್ರೆಂಡ್ ಆಗಿದೆ.
ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಮಲೆನಾಡ ಹಿನ್ನಲೆಯಲ್ಲಿ ಮಳೆಯ ನಡುವೆ ಮೂಡಿಬಂದ ಮ್ಯೂಸಿಕಲ್, ಮೆಲೊಡಿಯಸ್ ಹಾಡಿಗೆ ತುಳು ಭಾಷೆಯ ಸಾಹಿತ್ಯವಿದೆ.
ಈ ಹಾಡಿನಲ್ಲಿ ವಿಶೇಷವಾಗಿ ವಯೊಲಿನ್ ಧ್ವನಿಯನ್ನು ಹಿನ್ನಲೆಯಲ್ಲಿ ಬಳಸಿಕೊಳ್ಳಲಾಗಿದ್ದು, ಅದ್ಭುತವಾಗಿ ಮೂಡಿಬಂದಿದೆ. ಯಶಾ ಶಿವಕುಮಾರ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರಾಗ ಸುಧಾ ಎಂಬ ಹಾಡು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಆಗಿದೆ.