ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ರೂ.400 ಕೋಟಿ ಕ್ಲಬ್ ಸೇರುವ ಮೂಲಕ ಈ ಗುರಿ ತಲುಪಿದ ಮೊಟ್ಟ ಮೊದಲ ಮಲ್ಲು ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಮೋಹನ್ ಲಾಲ್ ಅಭಿನಯಕ ಕೊನೆಯ ನಾಲ್ಕು ಚಿತ್ರಗಳು ಈ ಮೊತ್ತಕ್ಕೆ ಕಾರಣವಾಗಿವೆ.
ಈ ಮೂಲಕ ಮೋಲಿವುಡ್ ಬಾಕ್ಸ್ ಆಫೀಸ್ನ ಸರದಾರ ಎನ್ನಿಸಿಕೊಂಡಿದ್ದಾರೆ. ಜೂನಿಯರ್ ಎನ್ಟಿಆರ್ ಜತೆಗಿನ ಚಿತ್ರ ರೂ.140 ಕೋಟಿ ಕಲೆಕ್ಷನ್ ಮಾಡಿದ್ದರೆ, ಒಪ್ಪಂ ರೂ.65 ಕೋಟಿ, ಪುಲಿಮುರುಗನ್ ಚಿತ್ರ ರೂ.163 ಕೋಟಿ ಕಲೆಕ್ಷನ್ ಮಾಡಿವೆ.
ಇನ್ನು ಇತ್ತೀಚೆಗೆ ಬಿಡುಗಡೆಯಾದ ಮುಂತಿರಿವಲ್ಲಿಕಾಲ್ ತಲಿರ್ಕುಂಬೋಲ್ ಚಿತ್ರ ಕೇರಳದಲ್ಲಿ ರೂ.20 ಕೋಟಿ ಕಲೆಕ್ಷನ್ ಮಾಡಿದೆ. ಮೋಹನ್ ಲಾಲ್ ಒಂದೊಂದು ಚಿತ್ರಕ್ಕೆ ರೂ.8 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುತ್ತವೆ ಮೂಲಗಳು. ಸದ್ಯಕ್ಕೆ ಮೋಹನ್ ಲಾಲ್ಗೆ ಮೋಲಿವುಡ್ನಲ್ಲಿ ಸ್ಪರ್ಧೆಯೇ ಇಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.