ಬೆಂಗಳೂರು: ಮೇಘನಾ ರಾಜ್ ಚಿರಂಜೀವಿ ಸರ್ಜಾ ಮಡದಿಯಾದ ಮೇಲೆ ಆಕ್ಟಿಂಗ್ ಮಾಡೋದೇ ಬಿಟ್ಟು ಬಿಟ್ರಾ? ಹಾಗಂತ ಎಷ್ಟೋ ಜನ ಮೇಘನಾಗೆ ಪ್ರಶ್ನೆ ಕೇಳುತ್ತಲೇ ಇದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ.
ಮೇಘನಾ ಇತ್ತೀಚೆಗಷ್ಟೇ ತಮ್ಮದೇ ನಿರ್ಮಾಣದ ಸಿನಿಮಾವೊಂದನ್ನು ನಿರ್ಮಿಸುತ್ತಿರುವ ಸುದ್ದಿ ಬಂದಿತ್ತು. ಹಾಗಿದ್ದರೂ ಆಕ್ಟಿಂಗ್ ಮಾಡೋದು ಯಾವಾಗ ಎಂಬ ಪ್ರಶ್ನೆಗೆ ಅವರೀಗ ಉತ್ತರ ಸಿಕ್ಕಿದೆ.
‘ಮದುವೆ ನಂತರ ನನ್ನ ಮುಂದಿನ ಸಿನಿಮಾ ಯಾವುದು ಎಂದು ಪ್ರಶ್ನೆ ಕೇಳುತ್ತಿದ್ದವರಿಗೆ ಇಲ್ಲಿದೆ ಉತ್ತರ. ನಾನು ಗೆಳೆಯ ಸೃಜನ್ ಜತೆ ಹೊಸ ಸಿನಿಮಾ (ಇನ್ನೂ ಹೆಸರಿಟ್ಟಿಲ್ಲ) ಮಾಡುತ್ತಿದ್ದೇನೆ. ಈಗಾಗಲೇ ನನ್ನ ಭಾಗದ ಚಿತ್ರೀಕರಣವೂ ಶುರುವಾಗಿದೆ’ ಎಂದು ಮೇಘನಾ ಘೋಷಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ