ಚೆನ್ನೈ : ನಟಿ ಮಂಜು ವಾರಿಯರ್ ಅವರು ಮಲಯಾಳಂ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ನಾಯಕಿಯಾಗಿ ಸೂಪರ್ ಹಿಟ್ ಚಿತ್ರಗಳನ್ನು ನೀಡುತ್ತಿದ್ದ ನಟಿ ಮಂಜು ವಾರಿಯರ್ ನಟಿಸಿದ ಸೂಪರ್ ಹಿಟ್ ಸಿನಿಮಾ ‘ಪ್ರದಿ ಪೂವಾಂಕೋಝಿ‘ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.
ಈ ಚಿತ್ರದಲ್ಲಿ ನಾಯಕಿ ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬ ಬಗ್ಗೆ ತಿಳಿಸುತ್ತದೆ. ಆದರೆ ಬಸ್ಸಿನಲ್ಲಿ ಮಂಜು ವಾರಿಯರ್ ಹಿಂಭಾಗಕ್ಕೆ ಒಬ್ಬ ವ್ಯಕ್ತಿಯು ಸ್ಪರ್ಶಿಸುತ್ತಿರುವ ದೃಶ್ಯ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಹಾಗೇ ಈ ಚಿತ್ರ ಯಶಸ್ಸು ಕಂಡಿತ್ತು.
ಆದಕಾರಣ ಈ ಚಿತ್ರವನ್ನು ತಮಿಳಿಗೆ ರಿಮೇಕ್ ಮಾಡಲಾಗುತ್ತಿದ್ದು, ಇದರಲ್ಲಿ ನಯನತಾರಾ ನಟಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ನಟಿ ನಯನತಾರಾ ಈ ವಿವಾದಾತ್ಮಕ ದೃಶ್ಯದಲ್ಲಿ ನಟಿಸುತ್ತಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ ಎನ್ನಲಾಗಿದೆ.