ದಕ್ಷಿಣ ಭಾರತದ ಪ್ರಖ್ಯಾತ ನಟಿ, ಬಹುಭಾಷಾ ತಾರೆ ಭಾವನಾ ಕರ್ನಾಟಕದ ಸೊಸೆಯಾಗ ಹೊರಟಿದ್ದಾರೆ. ಕನ್ನಡ ಚಿತ್ರರಂಗದ ನಿರ್ಮಾಪಕ, ಉದ್ಯಮಿ ನವೀನ್ ಜತೆ ಇಂದು ಅವರಿಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಕೊಚ್ಚಿಯಲ್ಲಿ ನಡೆದ ಖಾಸಗಿ ಸಮಾರಂಭವೊಂದರಲ್ಲಿ ಅವರಿಬ್ಬರು ಉಂಗುರ ಬದಲಾಯಿಸಿಕೊಂಡರು.
ಇವರಿಬ್ಬರ ನಡುವೆ ಪ್ರೀತಿ-ಪ್ರೇಮ ಇದೆ. ನಾಲ್ಕು ವರ್ಷಗಳಿಂದ ಇದು ಚಾಲ್ತಿಯಲ್ಲಿದೆ, ಎಂದು ಹಲವು ದಿನಗಳಿಂದ ಗಾಂಧಿನಗರದಲ್ಲಿ ವದಂತಿ ಹರಿದಾಡುತ್ತಿತ್ತು. ಇದಕ್ಕೆ ಪುಷ್ಟಿ ಎನ್ನುವಂತೆ ಇಂದು ಇಬ್ಬರು ನಿಶ್ಛಿತಾರ್ಥ ಮಾಡಿಕೊಂಡಿದ್ದಾರೆ.
ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಅವರು ಪುನೀತ್ ಅಭಿನಯದ ಜಾಕಿ, ಗಣೇಶ್ ನಾಯಕರಾಗಿರುವ ರೋಮಿಯೋ, ಕಿಚ್ಚ ಸುದೀಪ್ ಅಭಿನಯದ ವಿಷ್ಣುವರ್ಧನ, ಇತ್ತೀಚಿಗೆ ಬಿಡುಗಡೆಯಾಗಿರುವ ಚೌಕ ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ ನಟಿ ಅನೇಕ ಚಿತ್ರಗಳಿಗೆ ಸಹಿ ಹಾಕಿರುವ ಭಾವನಾ ಸದ್ಯದಲ್ಲಿ ಮದುವೆಯಾಗುವ ಯೋಚನೆಯನ್ನು ಹೊಂದಿಲ್ಲ.