ಹೈದರಾಬಾದ್: ತ್ರಿವಿಕ್ರಮ್ ನಿರ್ದೇಶನದಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಗುಂಟೂರು ಖಾರಂ ಎನ್ನುವ ಸಿನಿಮಾ ಮಾಡುತ್ತಿದ್ದಾರೆ.
ಈ ಸಿನಿಮಾದಲ್ಲಿ ನಾಯಕಿ ಪಾತ್ರದಿಂದ ಪೂಜಾ ಹೆಗ್ಡೆ ಹೊರಹೋಗಿದ್ದು ಭಾರೀ ಸುದ್ದಿಯಾಗಿತ್ತು. ಶ್ರೀಲೀಲಾ ಮತ್ತೊಬ್ಬ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ಅಭಿನಯಿಸಲು ಮಹೇಶ್ ಬಾಬು ಪಡೆದ ಸಂಭಾವನೆ ಬರೋಬ್ಬರಿ 78 ಕೋಟಿ ರೂ. ಎನ್ನಲಾಗಿದೆ. ಇದು ಇದುವರೆಗಿನ ಮಹೇಶ್ ಬಾಬು ಗರಿಷ್ಠ ಸಂಭಾವನೆ. ಈ ಸಿನಿಮಾ ಒಟ್ಟಾರೆ 200 ಕೋಟಿ ರೂ. ಬಜೆಟ್ ನಲ್ಲಿ ತಯಾರಾಗುತ್ತಿದೆ. 2024 ರಲ್ಲಿ ಸಿನಿಮಾ ರಿಲೀಸ್ ಆಗಲಿದೆ.