ಬೆಂಗಳೂರು: ಪ್ರೇಮಿಗಳ ದಿನದಂದೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಅಭಿಮಾನಿಗಳಿಗೆ ಅದೇ ದಿನ ಮತ್ತೊಂದು ಗುಡ್ ನ್ಯೂಸ್ ಕೊಡಲಿದ್ದಾರೆ.
ಫೆಬ್ರವರಿ 14 ರಂದು ಹಸೆಮಣೆ ಏರಲಿರುವ ಈ ಜೋಡಿ ಅದೇ ದಿನ ತಮ್ಮ ಅಭಿನಯದ ಲವ್ ಮಾಕ್ಟೇಲ್ 2 ಸಿನಿಮಾದ ಹಾಡಿನ ಲಿರಿಕಲ್ ವಿಡಿಯೋ ಲಾಂಚ್ ಮಾಡುತ್ತಿದ್ದಾರೆ. ಆ ಮೂಲಕ ತಮ್ಮ ಮದುವೆ ದಿನವನ್ನು ವಿಶೇಷವಾಗಿಸಲಿದ್ದಾರೆ. ಈಗಾಗಲೇ ಇಬ್ಬರ ಮನೆಯಲ್ಲೂ ಮದುವೆ ಸಂಭ್ರಮ ಶುರುವಾಗಿದೆ.