ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಅಡಿಯೋ ಹಕ್ಕನ್ನು ಲಹರಿ ಸಂಸ್ಥೆ ದಾಖಲೆಯ ಮೊತ್ತಕ್ಕೆ ಪಡೆದುಕೊಂಡಿದೆ.
ಕಿಚ್ಚ ಸುದೀಪ್ ಬರ್ತ್ ಡೇಗೆ ಮೊದಲು ಈ ಸಿಹಿ ಸುದ್ದಿ ಸಿಕ್ಕಿದೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ವಿಕ್ರಾಂತ್ ರೋಣ ಕೂಡಾ ಒಂದು. ಹೀಗಾಗಿ ಲಹರಿ ಸಂಸ್ಥೆ ಭಾರೀ ಮೊತ್ತಕ್ಕೆ ಅಡಿಯೋ ಹಕ್ಕು ಖರೀದಿ ಮಾಡಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ 3 ಕೋಟಿ ರೂ.ಗೆ ವಿಕ್ರಾಂತ್ ರೋಣ ಅಡಿಯೋ ಹಕ್ಕು ಮಾರಾಟವಾಗಿದೆ ಎನ್ನಲಾಗಿದೆ. ಇದಕ್ಕೂ ಮೊದಲು ಕೆಜಿಎಫ್, ಇದೀಗ ತ್ರಿಬಲ್ ಆರ್ ಸಿನಿಮಾ ಅಡಿಯೋ ಹಕ್ಕು ಕೂಡಾ ಲಹರಿ ಸಂಸ್ಥೆ ಪಾಲಾಗಿತ್ತು.